ಚಾಮರಾಜನಗರ : ಭಾರತ ದೇಶದ ಸಂಸ್ಕೃತಿ. ಪರಂಪರೆಯ ಆಧಾರ ಸ್ತಂಭ. ಬೃಂದಾವನದ ಜನರನ್ನು ಇಂದ್ರನ ಕೋಪದಿಂದ ಸಂರಕ್ಷಿಸಲು ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ರಕ್ಷಿಸಿದ ಕಷ್ಟ ಪರಮಾತ್ಮ ನಮೆಗೆಲ್ಲ ಆದರ್ಶ, ಗೋವರ್ಧನ ಪೂಜೆ ಸರ್ವರಿಗೂ ಸುಖ ಶಾಂತಿ ನೆಮ್ಮದಿ ಆರೋಗ್ಯ ನೀಡಲಿ. ಗೋಮಾತೆಯ ಸಂರಕ್ಷಣೆ ಹೆಚ್ಚಾಗಲಿ ಎಂದು ಶ್ರೀ ಶಂಕರ ಅಭಿಯಾನದ ರಾಜ್ಯ ಪ್ರಧಾನರಾದ, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಅವರು ಶ್ರೀ ಕೃಷ್ಣ ಪ್ರತಿಷ್ಠಾನ, ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್, ಶ್ರೀ ಶಂಕರ ಅಭಿಯಾನ ಕರ್ನಾಟಕ ಹಮ್ಮಿಕೊಂಡಿದ್ದ ಶ್ರೀ ಗೋವರ್ಧನ ಪೂಜೆ ಕಾರ್ಯಕ್ರಮ ಶ್ರೀ ಕೃಷ್ಣನ ಆದರ್ಶ ಕುರಿತ ಕಾರ್ಯಕ್ರಮ ಉದ್ಘಾಟಿಸಿ. ಮಾತನಾಡುತ್ತ, ಭಾರತೀಯ ಧರ್ಮ ರಕ್ಷಣೆಯಲ್ಲಿ ಶ್ರೀಕೃಷ್ಣನ ಕೊಡುಗೆ ಅಪಾರ. ಸರ್ವ ಜನರನ್ನು ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗಲು ಶ್ರೀ ಕೃಷ್ಣನೀಡಿರುವ ರುವ ಭಗವದ್ಗೀತೆಯ ಸಂದೇಶಗಳು ಶಾಶ್ವತ. ಭಗವದ್ಗೀತೆಯಲ್ಲಿ. ಪ್ರತಿ ಶಬ್ದವು ಮನುಷ್ಯನ ಕಲ್ಯಾಣ ಮತ್ತು ಮುಕ್ತಿಗೆ ದಾರಿಯಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಶ್ರೀ. ಕೃಷ್ಣನ ನುಡಿಗಳ ಸಂದೇಶವನ್ನು ಅರಿತು ತನ್ನ ಬದುಕನ್ನು ಒಪ್ಪಿಸಿಕೊಂಡಾಗ ಶಾಶ್ವತವಾದ ಸುಖಮಯ ಜೀವನ ಪಡೆಯುತ್ತಾನೆ. ಜೀವನದ ಜಂಜಾಟದಲ್ಲಿ ಅನೇಕ ಮೋಸ ವಂಚನೆ, ದ್ವೇಷ, ಅಸೂಯೆ ಮಾಡುವ ಪ್ರತಿಯೊಬ್ಬರಿಗೂ ಅಂತಿಮ ಕಾಲದಲ್ಲಿ ಅದರ ತಪ್ಪಿನ ಅರಿವು ಉಂಟಾಗುವುದು .ಭಗವದ್ಗೀತೆಯನ್ನು ಬಾಲ್ಯದಿಂದಲೂ ರೂಡಿಸಿಕೊಂಡಾಗ ಮನುಷ್ಯ ಜನ್ಮ ಸಾರ್ಥಕವಾಗಿ ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಂಡು, ಸುಖಿಯಾಗಿ, ಬದುಕುವ ಶಕ್ತಿಯನ್ನು ಭಗವಂತ ನೀಡುತ್ತಾನೆ. ಪ್ರಕೃತಿ ಮತ್ತು ಧರ್ಮ ಸಮಾಜದ ಸನ್ಮಾರ್ಗದ ಹಾದಿಯಲ್ಲಿ ಸುಖೀ ಸಂಸಾರವನ್ನು ಕಾಣಬಹುದು. ಪ್ರತಿ ಮನೆಯಲ್ಲೂ ಆದ್ಯಾತ್ಮ ಕೇಂದ್ರಗಳಾಗಿ ಬೆಳೆಯಬೇಕು. ಭಜನೆ,ಸತ್ಸಂಗ ಗಳು ನಡೆದು ಉತ್ತಮ ವಿಚಾರಗಳನ್ನು ಸ್ವೀಕರಿಸಿ ನೆಮ್ಮದಿಯಾಗಿ ಜೀವನವನ್ನು ನಡೆಸಲು ಭಾರತೀಯ ಸನಾತನ ಹಿಂದೂ ಧರ್ಮ ನೀಡಿದೆ ಎಂದರು. ಕಾರ್ಯಕ್ರಮದಲ್ಲಿ ಕುಸುಮ, ಶರಣ್ಯ, ರವಿ, ನಾಗಸುಂದರ್, ಸುಮನ್, ಸಾನಿಕ, ಶ್ರಾವ್ಯ, ಇದ್ದರು.
