
ಶೃಂಗೇರಿ: ಜಿಲ್ಲಾ ಮಟ್ಟದ 17 ವರ್ಷದೊಳಗಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜ್ಞಾನ ಭಾರತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದು, ಬಾಲಕರ ವಿಭಾಗದಲ್ಲಿ ಪರೀಕ್ಷಿತ್, ದಿಶಾನ್ ಡಿ., ಶ್ರೀಷ ಹೊಳ್ಳ ಹಾಗೂ ಪೃಥ್ವಿರಾಜ್ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅದೇ ರೀತಿ ಬಾಲಕಿಯರ ವಿಭಾಗದಲ್ಲಿ ಉನ್ನತಿ ಎಂ., ಸಾನ್ವಿ ಎಸ್. ಗೌಡ ಹಾಗೂ ಧನ್ಯಶ್ರೀ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅಕ್ಷತಾ ಬಿ.ಕೆ. ಮಾರ್ಗದರ್ಶನ ನೀಡಿದ್ದು, ಟೀಮ್ ಮ್ಯಾನೇಜರ್ ಆಗಿದ್ದ ಶ್ರೀಮತಿ ಸಹನಾ ಎಂ.ಆರ್. ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಮುಖ್ಯೋಪಾಧ್ಯಾಯರಾದ ಶ್ರೀ ಶಂಕರ್ ನಾರಾಯಣ ಗುರೂಜಿ ಹಾಗೂ ಜ್ಞಾನ ಭಾರತಿ ವಿದ್ಯಾ ಕೇಂದ್ರ ಮತ್ತು ಆಡಳಿತ ಮಂಡಳಿಯವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದು, ವಿಜೇತ ವಿದ್ಯಾರ್ಥಿಗಳೊಂದಿಗೆ ಜ್ಞಾನ ಭಾರತಿ ವಿದ್ಯಾ ಕೇಂದ್ರದ ದೈಹಿಕ ಶಿಕ್ಷಣ ಶಿಕ್ಷಕಿ ಅಕ್ಷತಾ ಬಿ.ಕೆ. ಹಾಗೂ ಟೀಮ್ ಮ್ಯಾನೇಜರ್ ಸಹನಾ ಎಂ.ಆರ್. ಉಪಸ್ಥಿತರಿದ್ದರು.




