
ಬೆಂಗಳೂರು: ರಕ್ಷಾ ಬಂಧನ ಭಾರತೀಯ ಹಬ್ಬಗಳಲ್ಲಿ ಪವಿತ್ರವಾದ ಹಬ್ಬ, ಅಣ್ಣ ಮತ್ತು ತಂಗಿಯರ ಬಾಂಧವ್ಯವನ್ನು ಅಮರಗೊಳಿಸುವ ರಕ್ಷಾಬಂಧನವೂ ಪವಿತ್ರ ಪ್ರೀತಿಯ ಸಂಕೇತವೆಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಯಲಹಂಕ ಉಪನಗರದಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಕ್ಷಾಬಂಧನ ಕಾರ್ಯಕ್ರಮಕ್ಕೆ ಭಾರತದ ಐತಿಹಾಸಿಕ ಪೌರಾಣಿಕ ಹಿನ್ನೆಲೆ ಇದೆ, ಶ್ರೀ ಕೃಷ್ಣ ಮತ್ತು ದ್ರೌಪದಿಯ ಪೌರಾಣಿಕ ಘಟನೆ ಹಿನ್ನಲೆ ಇದೆ, ಮಾನವ ಜನ್ಮದಲ್ಲಿ ಅಣ್ಣ ಮತ್ತು ತಂಗಿಗೆ ಪವಿತ್ರವಾದ ಬಂಧನದ ಸಂಕೇತವಿದೆ . ಪ್ರೀತಿ, ಮಮಕಾರ, ಶಕ್ತಿ, ಸಹಕಾರ, ಬಾಂಧವ್ಯ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿ ರಕ್ಷಣೆಯ ಧೈರ್ಯ ಸಿಗಲಿದೆ. ಶ್ರಾವಣ ಮಾಸದಲ್ಲಿ ರಕ್ಷಾಬಂಧನವೂ ಪ್ರತಿ ಮನೆಯಲ್ಲಿಯೂ ಆನಂದವನ್ನು ತರುವ ಹಬ್ಬವಾಗಿದೆ, ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಈ ಹಬ್ಬ ಇಂದು ವ್ಯಾಪಕವಾಗಿದ್ದು, ಅಣ್ಣ ತಂಗಿಯ ಬಾಂಧವ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರು. ಜೈಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಜ್ಯೋತಿಲಕ್ಷ್ಮಿ ನಾಗಭೂಷಣ ಮಾತನಾಡಿ ರಕ್ಷಾ ಬಂಧನವು ಅಣ್ಣ ತಂಗಿಯ ರಕ್ಷಣೆ, ಆತ್ಮ ಸಂತೋಷ ಹಾಗೂ ಪವಿತ್ರ ಭಾವನೆಯ ಹಬ್ಬ. ಅಣ್ಣ ಮನೆಗೆ ಬರುವುದು ಹೊಸತನ ತರುತ್ತದೆ. ಕುಟುಂಬ ಪ್ರೀತಿ, ಬಾಲ್ಯದ ನೆನಪು, ತಾಯಿ ಮನೆಯ ಸಂಗತಿಗಳ ನೆನಪು ಸುಖ ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕುಸುಮ ಋಗ್ವೇದಿ, ವಾಣಿಶ್ರೀ, ಶರಣ್ಯ, ಶ್ರಾವ್ಯ, ವರ್ಷಿಣಿ, ಮುರುಗೇಶ್, ವಂದನ, ವೈಷ್ಣವಿ, ಶ್ರೇಯಸ್, ಮೇಘನಾ ಶ್ರೀಕಂಠಯ್ಯ, ಪದ್ಮಾವತಿ, ಪ್ರೇಮ, ನಾಗೇಂದ್ರ, ನಾಗಭೂಷಣ್ ಇತರರು ಇದ್ದರು.




