ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘವು ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಜ. 29ರಂದು ಸುವರ್ಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಶ್ರೀ ಎಂ.ಕೆ. ರಮೇಶಾಚಾರ್ಯ ಮಂಗಳಗಾರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಕಾಮತ್ ಶೃಂಗೇರಿ ಅವರು ವಹಿಸಲಿದ್ದು, ಬಳಿಕ ‘ಯಕ್ಷಗಾನ ಕಲೆಗೆ ಮಲೆನಾಡಿನ ಯಕ್ಷಗಾನ ಸಂಘಗಳ ಕೊಡುಗೆ’ ವಿಷಯದ ಕುರಿತು ಯಕ್ಷಸಂವಾದ ನಡೆಯಲಿದೆ. ಖ್ಯಾತ ತಾಳಮದ್ದಲೆ ಅರ್ಥದಾರಿ ಹಾಗೂ ಯಕ್ಷಕವಿ ಪ್ರೊ. ಶ್ರೀ ಪವನ್ ಕಿರಣಕೆರೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಅದೇ ದಿನ ರಾತ್ರಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿ ಹೊಂಬಾಗಿಯಲ್ಲಿ ಕೀರ್ತಿ ಶೇಷ ಹಳಕ ರಮೇಶ್ ಭಟ್ಟರ ಸ್ಮರಣಾರ್ಥವಾಗಿ ಹಿರಿಯ ಚಂಡೆವಾದಕರಾದ ಶ್ರೀ ರಾಮಕೃಷ್ಣ ಮಂದಾರ್ತಿ ಅವರಿಗೆ ಹಾಗೂ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸುಬ್ರಹ್ಮಣ್ಯ ಚಿಟಾಣಿ ಅವರಿಗೆ ಸನ್ಮಾನ ನೆರವೇರಲಿದ್ದು, ನಂತರ ಕಲಾಸಂಘದ ಕಲಾವಿದರಿಂದ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
