
ನೆಲದ ಮೇಲೆ ಹುಲ್ಲಿನ ರೀತಿಯಲ್ಲಿ, ಬಳ್ಳಿಯ ರೀತಿಯಲ್ಲಿ ನೆಲೆದ ತುಂಬೆಲ್ಲ ಹಬ್ಬಿಕೊಂಡಿರುತ್ತದೆ. ಇದನ್ನು ಗಣಪತಿಗೆ ಪೂಜಿಸುವ ಸಂದರ್ಭದಲ್ಲಿ ಅರ್ಪಿಸಲಾಗುತ್ತದೆ ಹಾಗೆಯೇ ಇದರಲ್ಲಿ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದ್ದು, ದೂರ್ವೆಯ ಬೇರು, ಎಲೆ ಮತ್ತು ಕಾಂಡ ಎಲ್ಲವೂ ಆರೋಗ್ಯ ಗುಣವನ್ನು ಹೊಂದಿದೆ.
ಗರಿಕೆಯು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಕಷಾಯವನ್ನು ಮಾಡಿ ಸೇವಿಸುವುದರಿಂದ ಜ್ವರದ ವೈರಸ್ ನಾಶವಾಗುತ್ತದೆ. ದೂರ್ವೆಯನ್ನು ಕಿತ್ತು ತಂದು ಅದನ್ನು ನೀರಿನಿಂದ ಚೆನ್ನಾಗಿ ಶುಚಿಗೊಳಿಸಿ ಅದನ್ನು ಎರಡು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ರಸ ಬಿಡುವ ಹಾಗೆ ಕುದಿಸಿ, ಸೋಸಿ ಅದಕ್ಕೆ ಚಿಟಿಕೆಯಷ್ಟು ಸಕ್ಕರೆ ಹಾಕಿ ದಿನದಲ್ಲಿ ೩ ರಿಂದ ೪ ಬಾರಿ ಸೇವನೆ ಮಾಡಿರುವುದರಿಂದ ಜ್ವರ ಶಮನವಾಗುತ್ತದೆ.
ಮೂತ್ರನಾಳದ ಸೋಂಕು, ತುರಿಕೆ, ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ದುರ್ವೆಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಲಿಂಬು ರಸ ಹಾಗೂ ಜೇನು ತುಪ್ಪ ಬೆರಸಿ ಸೇವಿಸಿದರೆ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದಿಲ್ಲ.
ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಪಿಸಿಒಡಿ, ಪಿಸಿಒಎಸ್ ಹಾಗೂ ಮಾಸಿಕ ದಿನಗಳ ಅಧಿಕ ರಕ್ತಸ್ರಾವ ತಡೆಗೆ ಗರಿಕೆ ರಸ ಒಳ್ಳೆಯ ಔಷಧವಾಗಿದೆ. ಹಾಗೆಯೇ ಇದು ವಿಟಮಿನ್ ಎ ಹಾಗೂ ಸಿ ಗಳಿಂದ ಕೂಡಿದೆ. ಮಧುಮೇಹ ತಡೆಗಟ್ಟುವಲ್ಲಿ, ರಕ್ತ ಹೀನತೆ, ಸುಸ್ತು, ನಿಶ್ಯಕ್ತಿ ಕೂಡ ದೂರವಾಗುತ್ತದೆ. ದಿನಕ್ಕೆ ಒಂದು ಬಾರಿಯಾದರೂ ದೂರ್ವೆಯ ರಸ ಸೇವಿಸುವುದು ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.