ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಮತ್ತು ಕ್ರಿಸ್ಮಸ್ ಪ್ರಯುಕ್ತ ೧೭ ದಿನಗಳ ಹೆಲಿಟೂರಿಸಂ ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಹೆಲಿಟೂರಿಸಂ ಏರ್ಪಡಿಸಿದ್ದು, ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಮುಳ್ಳಯ್ಯನಗಿರಿ, ಪಶ್ಚಿಮಘಟ್ಟ, ಬಾಬಾಬುಡನ್ಗಿರಿ ಕಾಫಿ ಕಣಿವೆಗಳ ವೈಮಾನಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಮೂಡಿಗೆರೆ, ಕಳಸ ಮತ್ತು ಚಿಕ್ಕಮಗಳೂರಿನಲ್ಲಿ ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ದಿನ ೧೫೬ ಜನರಿಗೆ, ಬೆಳಗ್ಗೆ ೯ ಗಂಟೆಯಿಂದ ೧೨ರವರೆಗೆ, ಮಧ್ಯಾಹ್ನ ೧ರಿಂದ ಸಂಜೆ ೪ರವರೆಗೆ ಅವಕಾಶ ನೀಡಿದೆ. ತುಂಬಿ ಏವಿಯೇಷನ್ ಸಂಸ್ಥೆ ಹೆಲಿಟೂರಿಸಂ ನಡೆಸಲು ಅನುಮತಿ ಪಡೆದಿದ್ದು, ಹೆಲಿಕಾಪ್ಟರ್ನಲ್ಲಿ ಜಿಲ್ಲೆಯ ಪ್ರಕೃತಿ ಸೌಂದರ್ಯ ಸವಿಯಲು ಟಿಕೆಟ್ಗಾಗಿ ವೆಬ್ ಲಿಂಕ್ ಮೂಲಕ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
