ಮೂಡಿಗೆರೆ: ತಾಲೂಕಿನ ಪ್ರವಾಸೋದ್ಯಮ ಇಲಾಖೆ ಮತ್ತು ಹೋಂ ಸ್ಟೇ-ರೆಸಾರ್ಟ್ ಮಾಲೀಕರ ಸಂಘದಿಂದ ಆಯೋಜಿಸಲಾದ ಬೈಕ್ ರ್ಯಾಲಿಯನ್ನು ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ, ಹಸಿರು ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯವೆಂದು ಹೇಳಿ, ಪ್ರವಾಸಿಗರು ಪ್ಲಾಸ್ಟಿಕ್ ಬಳಕೆ ತಪ್ಪಿಸಿ ಬೆಟ್ಟ ಗುಡ್ಡಗಳನ್ನು ಮಲೀನಗೊಳಿಸಬಾರದೆಂದು ಮನವಿ ಮಾಡಿದರು. ರಾಜ್ಯದ ವಿವಿಧೆಡೆಯಿಂದ ಬಂದ 80ಕ್ಕೂ ಅಧಿಕ ಬ್ಲಾಗರ್ಗಳು ಹಾಗೂ ಬೈಕರ್ಗಳು ಭಾಗವಹಿಸಿದ್ದ ಈ ರ್ಯಾಲಿಯಲ್ಲಿ ಮೂಡಿಗೆರೆಯ ನೈಸರ್ಗಿಕ ಸೌಂದರ್ಯವನ್ನು ’ಮಲೆನಾಡಿನ ಸ್ವರ್ಗ’ ಎಂದು ಭೂಷಣ್ ಜೈನ್ ಪ್ರಶಂಸಿಸಿದರು.
