ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 5 ರಿಂದ 7 ರವರೆಗೆ ನಡೆಯಲಿರುವ 3 ದಿನಗಳ ಕೃಷಿ ಮೇಳಕ್ಕೆ ಜಿಲ್ಲಾಡಳಿತ ಭಾರಿ ಸಿದ್ಧತೆ ನಡೆಸುತ್ತಿದೆ. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಮಂಡ್ಯದಲ್ಲಿ ಹೆಚ್ಚಿನವರು ಕೃಷಿ ವೃತ್ತಿಯನ್ನೇ ಅವಲಂಭಿಸಿರುವುದರಿಂದ, ಈ ವರ್ಷದ ಕೃಷಿ ಹಬ್ಬವನ್ನು ಇನ್ನಷ್ಟು ಅದ್ಧೂರಿಯಾಗಿ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಮಂಡ್ಯದ ವಿ.ಸಿ. ಫಾರಂ ಬಳಿ ಕೃಷಿಮೇಳ ಜರುಗಲಿದೆ. ಆಧುನಿಕ ಕೃಷಿ, ಸಮಗ್ರ ಕೃಷಿ ವಿಧಾನಗಳು ಹಾಗೂ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿ ದೊರೆಯಲಿದೆ. ಮೇಳದಲ್ಲಿ ಸರಿ ಸುಮಾರು 300 ಸ್ಟಾಲ್ಗಳು ಭಾಗಿಯಾಗಲಿದ್ದು, ಯಾಂತ್ರೀಕೃತ ಬೇಸಾಯದ ಬಗ್ಗೆ ರೈತರಿಗೆ ಪ್ರಾಯೋಗಿಕ ಮಾಹಿತಿ ದೊರೆಯಲಿದೆ.
