
ಶೃಂಗೇರಿ: ಶೃಂಗೇರಿಯ ಡಿ. ಮುಂಡಗೋಡು ಶ್ರೀನಿವಾಸ್ ಮೂರ್ತಿಯವರ ಸ್ನೇಹ ಬಳಗದ ವತಿಯಿಂದ ‘ಖಾಲಿಯೇ ಉಳಿದ ದಿನಚರಿಯ ಹಾಳೆಗಳು’ ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 26ರಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಶೃಂಗೇರಿ ಶಾರದಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಕೆ. ಶ್ರೀನಿವಾಸ್ ಮೂರ್ತಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸ್ನೇಹ ಬಳಗದ ಸದಸ್ಯರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಚೆನ್ನಪ್ಪ ಎಂ.ಆರ್. ಅಧ್ಯಕ್ಷತೆ ವಹಿಸಲಿದ್ದು, ಫಾತಿಮಾ ದ್ಯಾವಗೋಡು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಒಳ-ಹೊರಗು ವಿಷಯದ ಕುರಿತು ವಕೀಲ ಸುಧೀರ್ ಕುಮಾರ್ ಮುರೋಳ್ಳಿ, ಶ್ರೀ ನಿವಾಸ್ ಮೂರ್ತಿ ವ್ಯಕ್ತಿ-ಶಕ್ತಿಯ ವಿಷಯದ ಕುರಿತು ಕುಂದಾಪುರದ ಸಿಡಿಪಿಒ ಟಿ.ಎಲ್. ಉಮೇಶ್ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಗಣ್ಯರು, ಶಿಕ್ಷಕರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.




