
ಶೃಂಗೇರಿ: ನಾಟ್ಯ ಲಲಿತಾಕಲಾ ಟ್ರಸ್ಟ್ (ರಿ), ನಾಟ್ಯವೈಭವ ನೃತ್ಯ ಅಕಾಡೆಮಿ.ಶೃಂಗೇರಿ ರವರಿಂದ ಅಭಿನಯ ಲಹರಿ ನೃತ್ಯೋತ್ಸವಂ -2026 ನೃತ್ಯ ಪ್ರಾಕಾರಗಳಾದ ಪಾಶ್ಚಾತ್ಯ ಮತ್ತು ಶಾಸ್ತ್ರೀಯ ನೃತ್ಯ ವಿಭಾಗದ ವರ್ಣಂ ರಾಜ್ಯಮಟ್ಟದ ಸ್ಪರ್ಧೆ ಯು ದಿನಾಂಕ:- 23/08/2026 ರಂದು ಭಾನುವಾರದಂದು ಬೆಳಗ್ಗೆ 9-00 ಗಂಟೆಯಿಂದ ಶ್ರೀ ಜೆಸಿಬಿಎಂ ಕಾಲೇಜು ಒಳಾಂಗಣ ಕ್ರೀಡಾಂಗಣ ಶೃಂಗೇರಿ ಯಲ್ಲಿ ನಡೆಯಲಿದೆ.
ನೃತ್ಯ ಸ್ಪರ್ಧೆಯು ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ ಪಾಶ್ಚಾತ್ಯ ಮತ್ತು ಶಾಸ್ತೀಯ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದ್ದು ತಂಡ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ 40000, 20000,10000 ಹಾಗೂ ವೈಯಕ್ತಿಕ ವಿಭಾಗದ ಸೀನಿಯರ್, ಜೂನಿಯರ್ ವಿಭಾಗದಲ್ಲಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ 5000, 4000,3000 ನಗದು ಬಹುಮಾನ, ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಶಾಸ್ತ್ರೀಯ ನೃತ್ಯ ವರ್ಣಂ ನಲ್ಲಿ ವಿಜೇತರಾದವರಿಗೆ ವಿದುಷಿ ಶ್ರೀಮತಿ ಕಮಲ ಭಟ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಸ್ಪರ್ದೇಯಲ್ಲಿ ಭಾಗವಹಿಸುವವರು ದಿನಾಂಕ :- 18/08/2026 ರೊಳಗೆ ಕೆಳಕಂಡ ನಂಬರ್ ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
8073233268,9448716872




