
ಚನ್ನಗಿರಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಅಂಗವಾಗಿ ಗುರುವಂದನೆ ವೇದಿಕೆಯಿಂದ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಶಿಕ್ಷಣ ಸಂಘಟನೆ ಹಾಗೂ ಹೋರಾಟ ಎಂಬ ದ್ಯೇಯದೊಂದಿಗೆ ನಮ್ಮ ಗುರು ವಂದನೆ ವೇದಿಕೆಯಿಂದ ಚನ್ನಗಿರಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ 14 ಜನ ಶಿಕ್ಷಕರು ಸ್ಪರ್ಧಿಸುತ್ತಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷ ಎಂ. ತಿಪ್ಪೇಶಪ್ಪ ಹೇಳಿದರು. ಅವರು ಶುಕ್ರವಾರ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪಟ್ಟಣದ ಕೆಪಿಎಸ್ ಶಾಲೆಯ ಆವರಣದಲ್ಲಿ ನಡೆದ ಬಿರುಸಿನ ಪ್ರಚಾರ ಸಭೆಯಲ್ಲಿ ಮಾತನಾಡಿ, ಶಿಕ್ಷಕರ ಹಕ್ಕುಗಳ ರಕ್ಷಣೆ, ವೃತ್ತಿಪರ ಅಭಿವೃದ್ಧಿ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮಹತ್ವಪೂರ್ಣ ಕಾರ್ಯಗಳಲ್ಲಿ ನಮ್ಮ ವೇದಿಕೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ತಿಳಿಸಿದರು; ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ 2026ರಿಂದ 31ರವರೆಗೆ ಅವಧಿಗೆ ಏಪ್ರಿಲ್ 19ರಂದು ಚುನಾವಣೆ ನಡೆಯಲಿದ್ದು, ನಮ್ಮ ಗುರು ವಂದನೆ ವೇದಿಕೆ ತಂಡವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಶಿಕ್ಷಕರ ಗೌರವ ಹೆಚ್ಚಿಸುವುದು, ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು, ಉಚಿತ ಆದಾಯ ಪತ್ರ ವಿತರಿಸುವುದು, ಹೆಚ್ಚುವರಿ ವರ್ಗಾವಣೆಗಳನ್ನು ತಾಲೂಕಿನಲ್ಲಿಯೇ ನಿಯುಕ್ತಿ ಮಾಡಿಸುವುದು, ಶಿಕ್ಷಕರ ಬಡ್ತಿ ಸೇರಿದಂತೆ ಸಂಘಟನೆಯ ಘನತೆಯನ್ನು ಎತ್ತಿ ಹಿಡಿಯಲು ನಮ್ಮ ವೇದಿಕೆಗೆ ಅವಕಾಶ ನೀಡುವಂತೆ ಕೇಳಿಕೊಂಡರು. ವೇದಿಕೆಯ ಸಾಮಾನ್ಯ ಕ್ಷೇತ್ರದಿಂದ ಯೋಗರಾಜ್, ಗುಡುದಪ್ಪ, ರಂಗನಾಥ್, ಬಸವರಾಜಪ್ಪ, ರವಿ, ಜಗದೀಶ್, ರಾಜಪ್ಪ, ಶ್ರೀನಿವಾಸ್, ರಾಜಶೇಖರ್ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಕವಿತಾ, ಜ್ಯೋತಿ, ಪಾರ್ವತಮ್ಮ, ಮೀನಾಕ್ಷಮ್ಮ, ವೀಣಾ ಸ್ಪರ್ಧಿಸುತ್ತಿದ್ದು, ಪ್ರಚಾರ ಸಭೆಯಲ್ಲಿ ತಾಲೂಕು ಮಾಜಿ ಅಧ್ಯಕ್ಷೆ ಶೋಭಾ, ಹೆಚ್.ಎನ್. ರವಿ, ಉಜ್ಜೀನಪ್ಪ, ಮಲ್ಲಿಕಾರ್ಜುನ ಗೌಡ, ವಸಂತ್ ಕುಮಾರ್, ಶರಣಪ್ಪ, ಗಣೇಶ್, ರೇವಣ್ಣ, ದೇವೇಂದ್ರಪ್ಪ, ಬಸವರಾಜಪ್ಪ ಉಪಸ್ಥಿತರಿದ್ದರು.
ವರದಿ: ಅರುಣ್ ಕುಮಾರ್ ಕುಳೆನೂರು.





