
ಮೂಡಿಗೆರೆ: ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಮತ ಚಲಾಯಿಸಿದರು. ಮತದಾನದ ಬಳಿಕ ಫಲಿತಾಂಶ ಪ್ರಕಟಗೊಂಡು ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾದ ಸಂತೋಷ್ ಅತ್ತಿಗೆರೆ ಅವರು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು. ಆಯ್ಕೆಗೊಂಡ ಅವರಿಗೆ ಸಂಘದ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಸನ್ನಕುಮಾರ್, ಗೌಡಳ್ಳಿ ಪ್ರಸನ್ನ, ಎ.ಆರ್. ಉದಯಶಂಕರ್, ಆನಂದ್ ಕಣಚೂರು, ನಯನ ತಳವಾರ, ಅಮರ್ನಾಥ್, ತನು, ಅನಿಲ್ ಮೊಂತೆರೋ, ಶಿವಕಾಶಿ, ಗಣೇಶ್ ಮಗ್ಗಲಮಕ್ಕಿ, ಪ್ರವೀಣ್ ಪೂಜಾರಿ, ಕಿರಣ್, ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.





