
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಮಾನವೀಯತೆ ಮತ್ತು ಧೈರ್ಯವನ್ನು ತೋರಿಸುವ ಘಟನೆ ನಡೆದಿದೆ. ಗಗನ್ ಸುಮಿತ್ರ ಮತ್ತು ಕೇಶವ ಅವರ ಪುತ್ರನಾಗಿದ್ದಾನೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ ಗಗನ್, ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ತನ್ನ ಸಂಕಲ್ಪವನ್ನು ಕೈಬಿಡದೆ ಪರೀಕ್ಷೆ ಬರೆದಿದ್ದಾನೆ. ಪರೀಕ್ಷೆ ಮಧ್ಯೆ ಅಸ್ವಸ್ಥಗೊಂಡಾಗ ಅವನನ್ನು ತಕ್ಷಣ ಬಣಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಡ್ರಿಪ್ ಹಾಕಿಸಿಕೊಂಡ ಸ್ಥಿತಿಯಲ್ಲೇ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬಂದು ತನ್ನ ಕೊನೆಯ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ. ಯಾವುದೇ ಪರಿಸ್ಥಿತಿಯಲ್ಲೂ ಪರೀಕ್ಷೆ ತಪ್ಪಿಸಿಕೊಳ್ಳಬಾರದೆಂಬ ದೃಢ ನಿಶ್ಚಯದಿಂದ ಗಗನ್ ಈ ಸಾಹಸ ಮಾಡಿದ್ದಾನೆ. ಇದೇ ವೇಳೆ ಸಮಾಜ ಸೇವಕ ಆರೀಫ್ ಮಾನವೀಯತೆ ತೋರಿಸಿ ವಿದ್ಯಾರ್ಥಿಗೆ ತಕ್ಷಣ ಚಿಕಿತ್ಸೆ ಒದಗಿಸಿ ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ನೆರವಾಗಿದ್ದಾರೆ. ವಿದ್ಯಾರ್ಥಿಯ ಧೈರ್ಯ ಮತ್ತು ಸಮಾಜ ಸೇವಕರ ಮಾನವೀಯತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದಾನೆ. ಗಗನ್ ಸುಮಿತ್ರ ಕೇಶವ ಅವರ ಪುತ್ರನಾಗಿದ್ದಾನೆ.





