ಕೊಳ್ಳೇಗಾಲ: ತಾಲೂಕಿನ ಎರೆಕಟ್ಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ರಸ್ತೆಯಿಂದ ಕೆಳಗಿಳಿಯಲು ಕಷ್ಟ ಪಡುತ್ತಿದ್ದುದನ್ನು ಗಮನಿಸಿದ ಅರಣ್ಯ ಇಲಾಖೆ ವಲಯ ಅಧಿಕಾರಿ ವಾಸು.ಬಿ.ಎಸ್. ಮಾರ್ಗದರ್ಶನದಲ್ಲಿ ಶ್ರಮದಾನ ನಡೆಸಿ ಮೆಟ್ಟಿಲು ನಿರ್ಮಿಸಿತು. ಶಾಲಾ ಆವರಣ ಸ್ವಚ್ಛಗೊಳಿಸಲಾಯಿತು. ಆ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಬಹಳ ಸಂತೋಷ ಪಟ್ಟರು. ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು , ಅರಣ್ಯ ಇಲಾಖೆಯ ವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ವನ್ಯಜೀವಿ ವಲಯ ಕೊಳ್ಳೇಗಾಲ ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
