ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತೋಡಿ ಅರಣ್ಯ ವಲಯದ ಹೊನ್ನಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿರುವ ಘಟನೆ ನಡೆದಿದೆ. ಘಟನೆ ಸ್ಥಳಕ್ಕೆ ಸ್ಥಳೀಯರು ತಲುಪುವಷ್ಟರಲ್ಲಿ ಕಾರಿನ ಬಳಿ ಯಾರೂ ಕಾಣಿಸದೇ ಇದ್ದು, ಕಾರಿನಲ್ಲಿ ಎಷ್ಟು ಮಂದಿ ಇದ್ದರು ಮತ್ತು ಅವರು ಎಲ್ಲಿಯವರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕಾರಿನಲ್ಲಿ ಒಬ್ಬ ಪ್ರಯಾಣಿಕ ಇದ್ದು ಆಸ್ಪತ್ರೆಗೆ ತೆರಳಿರುವ ಮಾಹಿತಿ ಮಾತ್ರ ಲಭ್ಯವಾಗಿದೆ. ಈ ಕುರಿತು ಮಲ್ಲಂದೂರು ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ದೊರಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವಾಹನದಲ್ಲಿದ್ದವರು ಪ್ರಾಣಿ ಬೇಟೆಗೆ ಬಂದಿದ್ದರೇ ?.. ಎಂಬ ಶಂಕೆಯೂ ವ್ಯಕ್ತವಾಗಿದೆ. ಘಟನೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
