
ಚನ್ನಗಿರಿ: ತಾಲೂಕು ಮಾವಿನಹೊಳೆ ಗ್ರಾಮದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲರಾದ ವಿಎನ್ ಗುರುಮೂರ್ತಪ್ಪ ರವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತುಗೊಳಿಸ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶಸಿಸಿದ್ದಾರೆ.
ಇವರ ಸೇವಾ ಅವಧಿಯಲ್ಲಿ 150 ಕ್ವಿಂಟಲ್ ಅಕ್ಕಿ ಹಾಗೂ 50 ಕ್ವಿಂಟಲ್ ಗೋಧಿ ಕೊರತೆ ಕಂಡು ಬಂದಿದೆ. ಶಾಲೆಯಿಂದ ಬಿಡುಗಡೆ ಹೊಂದಿದ್ದರೂ ಶಾಲೆಯ ದಿನನಿತ್ಯ ಕಾರ್ಯಗಳಲ್ಲಿ ಹಸ್ತಕ್ಷೇಪ ಕಂಡು ಬಂದಿದೆ. ಇಲಾಖೆಯ ಸೌಲಭ್ಯಗಳಾದ ಕಾಟ್ ಮತ್ತು ಬೆಡ್ ಗಳನ್ನು ಮಕ್ಕಳಿಗೆ ನೀಡದೆ ದಾಸ್ತಾನಿನ ಕೊಠಡಿಯಲ್ಲಿ ಇರಿಸಿರುವುದು ಹಾಗೂ ಮಕ್ಕಳಿಗೆ ಸ್ನಾನದ ಬಿಸಿನೀರಿನ ವ್ಯವಸ್ಥೆ ಮಾಡದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಇಲಾಖೆ ತನಿಖೆ ನೋಟಿಸ್ ನೀಡಿದ್ದು ಸಮಾಜಾಯಿಷಿಯು ಸಮಂಜಸವಾಗಿರುವುದಿಲ್ಲ. ಈ ಎಲ್ಲಾ ಅಂಶಗಳು ಮೇಲ್ನೋಟಕ್ಕೆ ಕರ್ತವಲೋಪ ಕಂಡುಬಂದಿದ್ದು ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಪಿಎಸ್ ಕಾಂತರಾಜು ರವರು 5-3-2026 ರಂದು ಆದೇಶಸಿದ್ದಾರೆ.
ವರದಿ: ಕುಳೇನೂರು ಅರುಣ್ ಕುಮಾರ್ ಎ ಚನ್ನಗಿರಿ
ತಾಲ್ಲೂಕು ವರದಿಗಾರರು ಚನ್ನಗಿರಿ





