
ಕೊಟ್ಟಿಗೆಹಾರ: ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಅವರು ಶೀಘ್ರದಲ್ಲೇ ಬಿಡುಗಡೆ ಆಗಲಿ ಎಂಬ ಆಶಯದಿಂದ, ಚಿಕ್ಕಮಗಳೂರು ನಗರದ ಹಿರೇಮಗಳೂರಿನ ನಿವಾಸಿಯಾದ ಅಭಿಮಾನಿ ಸುದೀಪ್ ಧರ್ಮಸ್ಥಳಕ್ಕೆ ಸುಮಾರು 100 ಕಿಲೋಮೀಟರ್ ಪಾದಯಾತ್ರೆ ಆರಂಭಿಸಿದ್ದಾರೆ. ಕಾಫಿನಾಡಿನ ಈ ಅಭಿಮಾನಿ ದರ್ಶನ್ ಅವರ ಫೋಟೋವನ್ನು ಹಿಡಿದು ಭಕ್ತಿಭಾವದಿಂದ ಚಿಕ್ಕಮಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ನಾಳೆ ಬೆಳಗ್ಗೆ ಧರ್ಮಸ್ಥಳ ತಲುಪುವ ನಿರೀಕ್ಷೆಯಿದೆ. ದರ್ಶನ್ ಮೇಲಿನ ಅಭಿಮಾನ ಮತ್ತು ನಂಬಿಕೆಯ ಸಂಕೇತವಾಗಿ ಕೈಗೊಂಡಿರುವ ಈ ಪಾದಯಾತ್ರೆ ಸ್ಥಳೀಯರ ಗಮನ ಸೆಳೆಯುತ್ತಿದೆ.




