ಕೊಟ್ಟಿಗೆಹಾರ: ಜನವರಿ 14ರಿಂದ 26ರವರೆಗೆ ಲಾಲ್ಬಾಗ್ನಲ್ಲಿ ನಡೆಯುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹಗಳ ಕುರಿತ “ತೇಜಸ್ವಿ ಲೋಕ” ಅನಾವರಣಗೊಳ್ಳಲಿದೆ. ರಾಜ್ಯ ತೋಟಗಾರಿಕಾ ಇಲಾಖೆ ಮತ್ತು ತೇಜಸ್ವಿ ಪ್ರತಿಷ್ಠಾನದ ಸಹಯೋಗದಲ್ಲಿ ಅಪರೂಪದ ಛಾಯಾಚಿತ್ರ ಗ್ಯಾಲರಿ, ಕೀಟಗಳ ಪ್ರದರ್ಶನ, ಪುಸ್ತಕ ಮಾರಾಟ, ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಮಾದರಿ ಮತ್ತು ಪುಷ್ಪ ವಿನ್ಯಾಸಗಳ ಮೂಲಕ ಅವರ ಚಿಂತನೆ, ಹವ್ಯಾಸ ಮತ್ತು ಸಾಹಿತ್ಯ ಜಗತ್ತನ್ನು ಪರಿಚಯಿಸಲಾಗುತ್ತಿದೆ. ಜನವರಿ 15ರಿಂದ 26ರವರೆಗೆ ನಾಟಕ, ಸಂವಾದ, ಸಾಕ್ಷ್ಯಚಿತ್ರ ಪ್ರದರ್ಶನಗಳು ನಡೆಯಲಿದ್ದು, ಜನವರಿ 14ರಂದು ತೇಜಸ್ವಿ ಪ್ರತಿಷ್ಠಾನದಿಂದ ಲಾಲ್ಬಾಗ್ವರೆಗೆ ಬೈಕ್ ಜಾಥಾ ಆಯೋಜಿಸಲಾಗಿದೆ.
