ಹೊಸ ವರ್ಷದ ಆರಂಭದೊಂದಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ದೇಶಾದ್ಯಂತ ವೈ-ಫೈ ಕಾಲಿಂಗ್ (VoWiFi) ಸೇವೆಯನ್ನು ಆರಂಭಿಸಿ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಮೊಬೈಲ್ ಸಿಗ್ನಲ್ ದುರ್ಬಲವಾಗಿರುವ ಪ್ರದೇಶಗಳಲ್ಲಿಯೂ ವೈ-ಫೈ ನೆಟ್ವರ್ಕ್ ಮೂಲಕ ಸುಲಭವಾಗಿ ಕರೆ ಮಾಡಲು ಈ ಸೇವೆ ಸಹಕಾರಿಯಾಗಿದೆ. ಗ್ರಾಮೀಣ ಹಾಗೂ ದೂರದ ಪ್ರದೇಶಗಳ ಬಳಕೆದಾರರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದ್ದು, ಯಾವುದೇ ಹೆಚ್ಚುವರಿ ಅಪ್ಲಿಕೇಶನ್ ಅಥವಾ ಶುಲ್ಕಗಳ ಅಗತ್ಯವಿಲ್ಲ. ಫೋನ್ನ ಡೀಫಾಲ್ಟ್ ಡಯಲರ್ನಿಂದಲೇ ಕರೆ ಮಾಡಬಹುದಾಗಿದ್ದು, ಇದು ಬಿಎಸ್ಎನ್ಎಲ್ ನೆಟ್ವರ್ಕ್ ನವೀಕರಣದ ಮಹತ್ವದ ಹೆಜ್ಜೆಯಾಗಿದೆ.
