ಸಿಎಂ ಸಿದ್ದರಾಮಯ್ಯ ಕೇಂದ್ರದಲ್ಲಿ ಮೋದಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರೇಗಾ ಕಾಯ್ದೆಯ ಮೂಲಕ ಜನರು ತಮ್ಮ ಸ್ಥಳದಲ್ಲೇ ಕೂಲಿ ಕೆಲಸ ಮಾಡಬಹುದು, 100 ದಿನ ಕನಿಷ್ಠ ಉದ್ಯೋಗ ಹಕ್ಕು ಹಾಗೂ ಮಹಿಳೆ, ದಲಿತ, ಆದಿವಾಸಿ ಕಾರ್ಮಿಕರ ಪಾಲುದಾರಿಕೆ ಖಚಿತವಾಗಿತ್ತು. ಆದರೆ ಹೊಸ ಬಿಲ್ (ವಿಬಿ ಜಿ ರಾಮ್ ಜಿ) ಜಾರಿಗೆ ಬಂದ ನಂತರ, ಉದ್ಯೋಗವು ಅಧಿಸೂಚಿತ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದ್ದು, ಗ್ರಾಮ ಪಂಚಾಯತ್ಗಳಿಗೆ ಯಾವುದೇ ಖಾತ್ರಿ ಇಲ್ಲದೆ, ಹಕ್ಕುಗಳು ಕಡಿತಗೊಂಡಿವೆ. ಕೇಂದ್ರ-ರಾಜ್ಯ ಅನುದಾನ ಹಂಚಿಕೆ ಶೇ.60–ಶೇ.40 ಆಗಿದ್ದು, ಗ್ರಾಮೀಣ ಬದುಕು ದುಸ್ತರಗೊಳ್ಳುತ್ತಿದೆ ಎಂದು ಸಿಎಂ ಹೇಳಿದರು.
