ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಹೆಚ್ಚುತ್ತಿರುವ ಜನಸಂದಣಿಯನ್ನು ಗಮನಿಸಿ ಬಿ.ಎಂ.ಆರ್.ಸಿ.ಎಲ್ ಪ್ರತಿ ಸೋಮವಾರ ಹೆಚ್ಚುವರಿ ರೈಲುಗಳನ್ನು ಸಂಚಾರಕ್ಕೆ ಸೇರಿಸಿದ್ದು ಆರ್.ವಿ.ರಸ್ತೆ – ಬೊಮ್ಮಸಂದ್ರ ಮಾರ್ಗದಲ್ಲಿ ವಾರಾಂತ್ಯದ ಬಳಿಕ ಸೋಮವಾರ ಬೆಳಿಗ್ಗೆ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಬಳಸುವ ಕಾರಣ ಈ ಕ್ರಮ ಜಾರಿಯಾಗಿದೆ. ಮೊದಲ ರೈಲು ಬೆಳಿಗ್ಗೆ 5.05 ಮತ್ತು 5.35ಕ್ಕೆ ಆರಂಭವಾಗಲಿದ್ದು ಉಳಿದ ದಿನಗಳಲ್ಲಿ ಸೇವೆ 6ಕ್ಕೆ ಮತ್ತು ಭಾನುವಾರ 7ಕ್ಕೆ ಆರಂಭವಾಗುತ್ತದೆ. ಈ ಸೌಲಭ್ಯದಿಂದ ಎಲೆಕ್ಟ್ರಾನಿಕ್ ಸಿಟಿ, ಜಯನಗರ, ತಿಲಕ್ನಗರ, ಜಯದೇವ ಆಸ್ಪತ್ರೆ, ಇನ್ಫೋಸಿಸ್ ಹಾಗೂ ಹೊಸೂರು ಭಾಗಕ್ಕೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ.
