Bengaluru: Chief Minister of Karnataka Siddaramaiah with DCM DK Shivakumar and other party MLAs, MPs, MLCs during an all party meeting on Cauvery and Mahadayi water disputes at Vidhana Soudha, in Bengaluru on Wednesday August 23, 2023. (Photo: IANS)
ಬೆಂಗಳೂರು: ಕಾಂಗ್ರೇಸ್ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಹೆಚ್ಚಾಗುತ್ತಿದ್ದೂ, ಅದರ ಹೊಡೆತ ದೆಹಲಿಗೂ ತಲುಪಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪಷ್ಟತೆ ತರಲು ಡಿ.ಕೆ. ಶಿವಕುಮಾರ್ ಬಣದ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದು, ಮಾಗಡಿ, ಮದ್ದೂರು, ಚನ್ನಗಿರಿ, ರಾಮನಗರ ಮತ್ತು ಹೊಸಕೋಟೆ ಕ್ಷೇತ್ರಗಳ ಶಾಸಕರು ಈಗ ದೆಹಲಿಯಲ್ಲೆ ತಂಗಿದ್ದಾರೆ. ಇದೇ ವೇಳೆ ಸಿ.ಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಬಣಗಳ ನಡುವೆ ಸಿ.ಎಂ ಸ್ಥಾನಕ್ಕೆ ಸಂಬಂಧಿಸಿದ ಒತ್ತಡ ರಾಜಕೀಯ ವರ್ತಮಾನವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ನಾಯಕರ ಅಹವಾಲುಗಳನ್ನು ಕಳೆದ ಮೂರು ದಿನಗಳಿಂದ ಆಲಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರಿಸ್ಥಿತಿಯನ್ನು ಸಮನ್ವಯಗೊಳಿಸಲು ಇಂದು ದೆಹಲಿಗೆ ತೆರಳಿದ್ದಾರೆ.
