ಚಿಕ್ಕಮಗಳೂರು: ಈ ವರ್ಷ ನಿರಂತರವಾಗಿ ಮಳೆ ಸುರಿದಿದ್ದರಿಂದ ಹಾಗೂ ಹವಮಾನದ ಕೊರತೆಯಿಂದ ಕಾಫಿ ಬೆಳೆ ಕೈ ತಪ್ಪುತ್ತಿದೆ. ಮೇ ಇಂದ ನವೆಂಬರ್ ಮಧ್ಯದವರೆಗೆ ನಿರಂತರ ಮಳೆಯಾಗಿ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕಾಫಿ ತೋಟಗಳಿಗೆ ದೊಡ್ಡ ನಷ್ಟವಾಗಿದ್ದು, ಇದರ ಪರಿಣಾಮ ದೇಶದ ಕಾಫಿ ಉತ್ಪಾದನೆ ಸುಮಾರು 30,000 ಟನ್ ಕಡಿಮೆಯಾಗಬಹುದು ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ (ಕೆಪಿಎ) ತಿಳಿಸಿದೆ. ಸೂರ್ಯನ ಕಿರಣಗಳ ಕೊರತೆ, ತಂಪು ಹವಮಾನ ಮತ್ತು ರೋಗಭಾದೆಯಿಂದ ಅರೆಬಿಕಾ ಮತ್ತು ರೊಬಸ್ಟಾ ಬೆಳೆ ಕುಸಿದಿದ್ದು, ದೇಶದ 70% ಕಾಫಿ ಕರ್ನಾಟಕದಲ್ಲೇ ಬೆಳೆಯಲಾಗುತ್ತಿದ್ದರು, ಕಳೆದ 20 ವರ್ಷಗಳಿಂದ ಹವಮಾನ ಬದಲಾವಣೆಗಳಿಂದ ಉತ್ಪಾದನೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಸೋಮವಾರ ಕೆಪಿಎ ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
