ಜಯಪುರ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರದ ಬಳಿ ಪ್ರೇಮಿಯೊಬ್ಬ ತನ್ನ ಮದುವೆಗೆ ಅಡ್ಡಿಯಾಗಿದ್ದಕ್ಕೆ ವ್ಯಕ್ತಿಯೊಬ್ಬನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವರುಣ್ ಎಂಬಾತ ರಾಜೇಶ್ ಎಂಬುವವನ ಪತ್ನಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ, ಮದುವೆ ಪ್ರಸ್ತಾಪವನ್ನೂ ಮಾಡಿದ್ದ ಆದರೆ ರಾಜೇಶ್ ಇದಕ್ಕೆ ಒಪ್ಪಿರಲಿಲ್ಲ. ಈ ಹಿಂದೆ ಹಲವು ಬಾರಿ ಮಾತಿನಲ್ಲಿ ತಕರಾರು ನಡೆದಿತ್ತು. ಆದರೆ ಈ ಬಾರಿ ವರುಣ್ ಮದುವೆಯಾಗುವುದಾಗಿ ಹಠ ಹಿಡಿದಾಗ ಒಪ್ಪದ ರಾಜೇಶ್ ಮೇಲೆ ವರುಣ್ ಚಾಕುವುನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ ಮೃತಪಟ್ಟಿದ್ದು, ಇದರ ಸಂಬಂಧವಾಗಿ ವರುಣ್ ವಿರುದ್ಧ ಜಯಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
