ಕುಂದಾಪುರ: ನಿತ್ಯಹರಿದ್ವರ್ಣ ಕಾಡುಗಳಿಂದ, ಪರ್ವತಗಳಿಂದ ಆವೃತವಾಗಿರುವ ಬ್ರಾಹ್ಮಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಮಲಶಿಲೆಯಲ್ಲಿರುವ ಸುಪಾರ್ಶ್ವ ಗುಹೆಯು ಬಹಳ ಇತಿಹಾಸವನ್ನು ಹೊಂದಿದೆ. ಈ ಸುಪಾರ್ಶ್ವ ಗುಹೆಯು ಬ್ರಾಹ್ಮಿ ಶ್ರೀ
ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆಯಿಂದ 2-3ಕಿ.ಮೀ. ದೂರದಲ್ಲಿದೆ. ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮೀ ದೂರದಲ್ಲಿದೆ. ಈ ಗುಹೆಯ ಪಕ್ಕದಲ್ಲಿ ಕುಬ್ಜಾ ಎಂಬ ನದಿ ಹರಿಯುತ್ತದೆ. ಹಿಂದಿನ ಕಾಲದಲ್ಲಿ ಸುಪಾರ್ಶ್ವನೆಂಬ
ರಾಜ ತನ್ನ ಪಾಪಗಳಿಂದ ಮೋಕ್ಷವನ್ನು ಪಡೆಯಲು ಹುಡುಕಿದ ಅನೇಕ ಸ್ಥಳಗಳಲ್ಲಿ ಕೊನೆಯದಾಗಿ ಸಿಕ್ಕ ಸ್ಥಳವೇ ಈ ಗುಹೆ. ಆದ್ದರಿಂದ ಈ ಸ್ಥಳಕ್ಕೆ ಸುಪಾರ್ಶ್ವ ಗುಹೆ ಎಂದು ಕರೆಯುತ್ತಾರೆ. ತನ್ನ ಮೋಕ್ಷವನ್ನು ಪಡೆಯುವ ಕಾರ್ಯದಲ್ಲಿ ಯಾವುದೇ ರೀತಿಯ
ತೊಂದರೆ ಬರದಂತೆ ಕಾಯಲು ಸುಪಾರ್ಶ್ವ ಶಿವನಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದಾಗ ಶಿವ ತನ್ನ ಗಣಗಳಲ್ಲಿ ಒಂದಾದ ಭೈರವನನ್ನು ಕಳುಹಿಸುತ್ತಾನೆ. ಹಾಗಾಗಿ ಈ ಗುಹೆಯಿಂದ 2-3 ಕಿ.ಮೀ. ದೂರದಲ್ಲಿ ಭೈರವ ಸ್ವಾಮಿಯ ವಿಗ್ರಹವಿದೆ. ಈ ಸುಪಾರ್ಶ್ವ ಗುಹೆಯ
ಬಳಿ 3 ಅಧಿದೇವತೆಗಳಾದ ಕಾಳಿ, ಲಕ್ಷ್ಮೀ, ಸರಸ್ವತಿಯ ಸಮ್ಮಿಲನದ ಪ್ರತೀಕವಾಗಿ ತ್ರಿಶಕ್ತಿ ಲಿಂಗವೆಂಬ 3 ಲಿಂಗಗಳಿವೆ. ಪುರಾಣಗಳ ಪ್ರಕಾರ ಆದಿಶೇಷ ಹಾಗೂ ಗರುಡ ಭಗವಾನ್ ಶಿವನ ಶಾಪದಿಂದ ಮೋಕ್ಷವನ್ನು ಪಡೆಯಲು ತನ್ನನ್ನು ಬೆಚ್ಚಗಾಗಿಸಲು
ಗುಹೆಯ ಬಳಿ ಬರುತ್ತದೆ. ಹಾಗಾಗಿ ಗುಹೆಯ ಮುಂಭಾಗದಲ್ಲಿ ಬೆಂಕಿಯನ್ನು ಬೆಳಗಿಸುತ್ತಾರೆ. ದೇವಾಲಯದ ಸಿಬ್ಬಂದಿ ಹಾಗೂ ಬೆಳಕಿಲ್ಲದೆ ಗುಹೆಯ ಒಳಗೆ ಹೋಗಲು ಅಸಾಧ್ಯ.
