
ಚಿಕ್ಕಮಗಳೂರು : ಖ್ಯಾತ ಗಾಯಕ ಸಂದೇಶ್ ನೀರ್ ಮಾರ್ಗ ಅವರಿಗೆ ಕೊಟ್ಟಿಗೆಹಾರದಲ್ಲಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸಂದೇಶ್ ನೀರ್ ಮಾರ್ಗ ಅವರನ್ನು ಮಾರ್ಗಮಧ್ಯೆ ಕೊಟ್ಟಿಗೆಹಾರದಲ್ಲಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯನ್ನು ಗುರುತಿಸಿ, ಅವರ ಕಲಾ ಸೇವೆಗೆ ಗೌರವ ಸಲ್ಲಿಸಲಾಯಿತು. ಸಂದೇಶ್ ನೀರ್ ಮಾರ್ಗ ಅವರ ಸಂಗೀತ ಕ್ಷೇತ್ರದ ಸಾಧನೆ ಹಾಗೂ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸಾಧನೆಗಳನ್ನು ಮಾಡುವಂತಾಗಲಿ ಎಂದು ಈ ವೇಳೆ ಶುಭ ಹಾರೈಸಲಾಯಿತು. ಕೊಟ್ಟಿಗೆಹಾರದಲ್ಲಿ ನಡೆದ ಈ ಆತ್ಮೀಯ ಸನ್ಮಾನ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಂಜಯ್ ಕೊಟ್ಟಿಗೆಹಾರ, ಅಭಿಲಾಷ್, ಸಾಗರ್, ಗಿರೀಶ್, ವಿನಯ್, ಆದ್ಯ ಸೇರಿದಂತೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಗಾಯಕ ಸಂದೇಶ್ ನೀರ್ ಮಾರ್ಗ ಅವರನ್ನು ಗೌರವಿಸಿದರು.




