
ಶೃಂಗೇರಿ: ಕಾವಡಿ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ( Rss) ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನೂರಾರು ಸ್ವಯಂಸೇವಕರು ಗ್ರಾಮಸ್ತರು ತಾಯಂದಿರು ಪುಟಾಣಿ ಮಕ್ಕಳು ಜಾತಿ ಬೇಧ ಮರೆತು ಸೇರಿ ಪರಸ್ಪರ ರಕ್ಷೆ ಕಟ್ಟಿ ಸಂಭ್ರಮಿಸಿ ರಾಷ್ಟ್ರ ಧರ್ಮ ರಕ್ಷಣೆಯ ಪಣ ತೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಎಸ್ ಎಸ್ ಪ್ರಾಂತ ಸಹ ಸಂಪರ್ಕ ಪ್ರಮುಖ ಶ್ರೀ ಯಾದವ ಕೃಷ್ಣ ಮತ್ತೂರು ಅವರು ಭಾರತ ಜಗತ್ತಿಗೆ ಅನೇಕ ಮೌಲ್ಯಗಳನ್ನು ಕೊಟ್ಟಿತ್ತು ಅದರಲ್ಲಿ ಪ್ರಮುಖವಾಗಿದ್ದು ಕೌಟುಂಬಿಕ ಮೌಲ್ಯ ಅದನ್ನು ಉಳಿಸುತ್ತ ‘ಸ್ವ’ ಚಿಂತನೆಯ ಮೂಲಕ ಸಾಮರಸ್ಯ ಸಮಾಜ ನಿರ್ಮಾಣ ಮಾಡಬೇಕು ಎಂದರು. ವಸದೈವ ಕುಟುಂಬಕಮ್ ಎಂಬ ಶ್ರೇಷ್ಠ ವಿಚಾರ ಇಟ್ಟುಕೊಂಡು ಆರ್ ಎಸ್ ಎಸ್ ಕಳೆದ 100 ವರ್ಷಗಳಿಂದ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಮಾಡಿದ್ದರ ಪರಿಣಾಮ ಸಮಾಜ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ 100 ವರ್ಷದಲ್ಲಿ ಇದು ಸಾಭಿತಾಗಿದೆ ಮತ್ತು ಇಡಿ ಜಗತ್ತು ನಮ್ಮನ್ನು ಸ್ವೀಕರಿಸಿದೆ ಇದಕ್ಕೆ ಉದಾಹರಣೆ ನ್ಯೂಯಾರ್ಕ್ ನಲ್ಲಿ ನಡೆದ univarsal oneness ಕಾರ್ಯಕ್ರಮ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯುವ ಸಾಮಾಜಿಕ ಮುಖಂಡರು ಶ್ರೀ ಭರತ್ ಗಿಣಕಲ್ ಮಾತನಾಡಿ ಆರ್ ಎಸ್ ಎಸ್ 1925 ರಲ್ಲಿ ಪ್ರಾರಂಭ ಆದರೂ ಕೂಡ ಅದರ ಸ್ಥಾಪಕರು 10 ವರ್ಷಗಳಿಂದ ಅದರ ಬಗ್ಗೆ ಅಧ್ಯಯನ ಮಾಡಿ ಯೋಚಿಸಿ ಈ ಶ್ರೇಷ್ಠ ಸಂಘಟನೆ ಶುರು ಮಾಡಿದ್ದು ಎಂದರು. ಸ್ವಾತಂತ್ರ ಹೋರಾಟದಲ್ಲೂ ಕೂಡ ಸಂಘ ಸ್ಥಾಪಕರು ತುಂಬಾ ಹೋರಾಟ ಮಾಡಿದ್ದರು ಎಂದು ಸ್ಮರಿಸಿದ್ದು, ನಾವೆಲ್ಲರೂ ಆರ್ ಎಸ್ ಎಸ್ ಜೊತೆಗೆ ಹೆಚ್ಚು ಜೋಡಿಸಿಕೊಂಡು ದೇಶ ಕಟ್ಟಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸ್ಥಾನಿಯರಾದ ದೇವಸ್ಥಾನ ಅರ್ಚಕರಾದ ಶ್ರೀ ರಾಮಮೂರ್ತಿ ಭಟ್, ಜಿಲ್ಲಾ ಕಾರ್ಯವಾಹರಾದ ನೂತನ ಸೂರ್ಯ, ಶಿವಾನಂದ ಹುಲಿಮನೆ, ಕೃಷ್ಣ ಮೂರ್ತಿ ಕೊರೆಕಲ್ಲು, ರಾಘವೇಂದ್ರ ಹಂಚಲಿ, ಸುಜೇಂದ್ರ ಚಗತೆ, ರಾಮಕೃಷ್ಣ ಅಂಬಳೂರು, ಸವಿತೃ ಭಾರ್ಗವ, ಹರೀಶ್ ತೊರೆಹಡ್ಲು ಮುಂತಾದವರು ಉಪಸ್ಥಿತಿ ಇದ್ದರು.




