
ಕೊಟ್ಟಿಗೆಹಾರ: ಡಾ. ಕೆ. ಮಧುಕರ್ ಶೆಟ್ಟಿ ಐಪಿಎಸ್ ಸಮಾಜ ಸೇವಾ ಸಂಘ (ರಿ), ಗುಪ್ತಶೆಟ್ಟಿಹಳ್ಳಿ, ಅಲ್ದೂರು ಹೋಬಳಿ, ಚಿಕ್ಕಮಗಳೂರು ತಾಲೂಕು ವತಿಯಿಂದ ಬಣಕಲ್ ಹೋಬಳಿಯ ತಳವಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಭೆ ನಡೆಸಿದ್ದು, ಸಭೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಕಬ್ಬಿನಗದ್ದೆ, ಉಪಾಧ್ಯಕ್ಷೆ ಸರಿತಾ, ಮುಖ್ಯ ಶಿಕ್ಷಕ ಶೈಲಾರಾಧ್ಯ, ಅಂಗನವಾಡಿ ಶಿಕ್ಷಕಿ ಗಾಯತ್ರಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಡಾ. ಕೀರ್ತಿ ಹಾಗೂ ಶಿಲ್ಪಾ ಟಿ., ಗ್ರಾಮಸ್ಥರು ಮತ್ತು ಪೋಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪೆನ್ನು, ಪೆನ್ಸಿಲ್ ಹಾಗೂ ನೋಟ್ಬುಕ್ಗಳನ್ನು ವಿತರಿಸಲಾಗಿದ್ದು, ಅಂಗನವಾಡಿ ಮಕ್ಕಳಿಗೆ ಸ್ಲೇಟ್ ಹಾಗೂ ಬಳಪಗಳನ್ನು ನೀಡಲಾಯಿತು. ಸಮಾಜ ಸೇವಾ ಸಂಘದ ಅಧ್ಯಕ್ಷ ಬೈರಿಗದ್ದೆ ರಮೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಮಣಿಕಂಠ ಬಿ.ಆರ್., ಸದಸ್ಯರಾದ ಕಿರಣ್ ಬಿ.ಆರ್., ನಿಖಿಲ್ ಬಿ.ಸಿ., ಕಿಶೋರ್ ಬಿ.ಆರ್., ಅನಿಲ್, ಪುಟ್ಟಯ್ಯ, ನಾರಾಯಣ ಹಾಗೂ ಗ್ರಾಮಸ್ಥರಾದ ಧರ್ಮೇಶ್, ಸುನಿತಾ, ಸಲಿತಾ, ಕೀರ್ತಿ, ಶ್ರೀನಿವಾಸ, ನಾಗೇಶ್ ಗೌಡ್ರು, ಪೂರ್ಣೇಶ್ ಹೆಬ್ಬರಿಗೆ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಮಾಜ ಸೇವಾ ಸಂಘ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.




