
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೋಸಿಯೇಷನ್ (ರಿ.) ಹಾಗೂ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್ ಕಾರ್ಪೋರೇಶನ್ (ರಿ.), ಕಾರ್ಕಳ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದೇವಸ್ಥಾನದ ಆಡಳಿತ ಮುಕ್ತೇಸರ್ ಶಿಲ್ಪಿ ರಾಮಚಂದ್ರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕೆ. ಸುಧಾಕರ ಆಚಾರ್ಯ (ಸಾಲ್ಮರ) ಅಧ್ಯಕ್ಷರಾಗಿ, ಕೆ. ಸುರೇಶ್ ಆಚಾರ್ಯ (ನಿಟ್ಟೆ) ಕಾರ್ಯದರ್ಶಿಯಾಗಿ, ಪಿ. ವಸಂತ ಆಚಾರ್ಯ ಕೋಶಾಧ್ಯಕ್ಷರಾಗಿ, ಕೆ. ದಿನೇಶ್ ಆಚಾರ್ಯ ಗೌರವ ಅಧ್ಯಕ್ಷರಾಗಿ, ಕೆ. ದಿವಾಕರ ಆಚಾರ್ಯ (ನಿಟ್ಟೆ) ಉಪಾಧ್ಯಕ್ಷರಾಗಿ ಹಾಗೂ ಪಿ. ರವಿ ಆಚಾರ್ಯ (ಪೆರ್ವಾಜೆ) ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮುಖ್ಯ ಅತಿಥಿಯಾಗಿ ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀ ಪ್ರಕಾಶ್ ಆಚಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಪಿ. ರವಿ ಆಚಾರ್ಯ, ಕೆ. ಸುರೇಶ್ ಆಚಾರ್ಯ (ನಿಟ್ಟೆ), ಪಿ. ವಸಂತ ಆಚಾರ್ಯ, ಕೆ. ದಿನೇಶ್ ಆಚಾರ್ಯ, ಕೆ. ಸುಧಾಕರ ಆಚಾರ್ಯ ಹಾಗೂ ಭಜನಾ ಸೇವಾ ಸಮಿತಿಯ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಸೋಸಿಯೇಷನ್ ವತಿಯಿಂದ ಶ್ರೀ ಕಾಳಿಕಾಂಬ ಭಜನಾ ಸೇವಾ ಸಮಿತಿಗೆ ₹15,000 ಸಹಾಯಧನ ನೀಡಲಾಯಿತು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 13 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 95%ಕ್ಕಿಂತ ಹೆಚ್ಚು ಅಂಕ ಪಡೆದ 19 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸದಸ್ಯರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಕೆ. ರತ್ನಾಕರ ಆಚಾರ್ಯ (ಕಟ್ಟಿಮಾರ್), ಎಂ. ರಮೇಶ್ ಆಚಾರ್ಯ (ಪರಪು), ಪ್ರಶಾಂತ್ ಆಚಾರ್ಯ, ಸತೀಶ್ ಆಚಾರ್ಯ, ಅಶೋಕ್ ಆಚಾರ್ಯ (ಅಂಡಾರ್), ಎಸ್. ಪ್ರವೀಣ್ ಆಚಾರ್ಯ, ವೈ.ಟಿ. ಪ್ರಕಾಶ್ ಆಚಾರ್ಯ ಹಾಗೂ ಕೆ. ಕರುಣಾಕರ ಆಚಾರ್ಯ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಕೆ. ಸುಧಾಕರ ಆಚಾರ್ಯ ಸ್ವಾಗತಿಸಿದರು. ರಮೇಶ್ ಆಚಾರ್ಯ ಬಂಗ್ಲಗುಡ್ಡೆ ವಂದಿಸಿದರು. ಎಂ. ರಮೇಶ್ ಆಚಾರ್ಯ ಪರಪು ಕಾರ್ಯಕ್ರಮ ನಿರೂಪಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




