
ಪಂಚ ಯೋಜನೆಗಳಲ್ಲಿ ಒಂದಾದ “ಶಕ್ತಿ” ಯೋಜನೆಯು ಬರೋಬ್ಬರಿ 500 ಕೋಟಿ ಜನರನ್ನು ತಲುಪಿದೆ. ಜೂನ್11, 2023ರಲ್ಲಿ ಪ್ರಾರಂಭಿಸಿದ ಈ ಶಕ್ತಿ ಯೋಜನೆಯು ಈಗ ಯಶಸ್ವಿಯಾಗಿ 500 ಕೋಟಿಯನ್ನು ತಲುಪಿದ್ದು ಇದರ ಸಲುವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಬೆಳಿಗ್ಗೆ ಸುಮಾರು 10ಗಂಟೆಗೆ ಬೆಂಗಳೂರಿನ ವಿಂಡ್ಸರ್ ವೃತ್ತದ ಬಳಿ ಬಸ್ಸ್ನಲ್ಲಿ ಉಚಿತ ಪ್ರಯಾಣದ ಮಹಿಳೆಯರಿಗೆ ಕಂಡಕ್ಟರ್ ಆಗಿ 500 ನೇ ಕೋಟಿಯ ಟೀಕೆಟ್ ನೀಡಿದ್ದಾರೆ.
ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೊಳಿಸಿದ ಶಕ್ತಿ ಯೋಜನೆಯು ಸರ್ಕಾರವು ಅಧಿಕಾರಕ್ಕೆ ಬಂದ21 ದಿನದಲ್ಲೇ ಪ್ರಾರಂಭಿಸಿದೆವು ಈಗ ಇದು ನಿರೀಕ್ಷೆಗೂ ಮೀರಿದ ಫಲವನ್ನು ನೀಡಿದೆ ಎಂದು ಸಿ.ಎಂ.ಸಿದ್ಧರಾಮಯ್ಯ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.