
ಶೃಂಗೇರಿ: ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರಾದಾ ಪೀಠದ ಆಶ್ರಯದಲ್ಲಿ ಯುವಕರಿಗಾಗಿ ವಿಶೇಷ ವೃತ್ತಿ ತರಬೇತಿ ಮತ್ತು ಉದ್ಯಮ ಶೀಲತಾ ಪ್ರೇರಣೆಗೆ, ಕೌಶಲ್ಯಾಭಿವೃದ್ಧಿಗೆ, ಯುವಭಾರತೀ ಎಂಬ ಕಾರ್ಯಾಗಾರವು ಫೆಬ್ರವರಿ 27ರಂದು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಹಾಗೂ ಫೆಬ್ರವರಿ 28ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ರಾಜನಗರದ ಶ್ರೀ ವಿದ್ಯಾಭಾರತಿ ಭವನದಲ್ಲಿ ನಡೆಯಲಿದೆ. “Our Roots, Our Future” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀ ಪಿ.ಎ. ಮುರಳಿ, ಚಕ್ರವರ್ತಿ ಸುಲಿಬೆಲೆ, ಪ್ರಕಾಶ್ ಬೆಳವಾಡಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಯುವಕರಿಗೆ ಮಾರ್ಗದರ್ಶನ ನೀಡಲಿದ್ದು, ಉದ್ಯಮಶೀಲತೆ, ನಾಯಕತ್ವ, ಸಂಸ್ಕೃತಿ ಮತ್ತು ಸಮಾಜಸೇವೆಯ ಕುರಿತಾಗಿ ಉಪನ್ಯಾಸಗಳು, ಪ್ರಶ್ನೋತ್ತರ, ಹಾಗೂ ನೇರ ಸಂವಾದಗಳು ನಡೆಯಲಿದೆ. ಪ್ರವೇಶ ಉಚಿತವಾಗಿದ್ದರೂ ಪೂರ್ವ ನೋಂದಣಿ ಕಡ್ಡಾಯವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.




