ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಸಿ.ಎಂ ಸಿದ್ಧರಾಮಯ್ಯ ಅನಾವರಣಗೊಳಿಸಿ ರಾಷ್ಟ್ರಧ್ವಜವು ಕೇವಲ ಖಾದಿ ವಸ್ತುವಲ್ಲ, ಅದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಹೇಳಿದರು. ಕೇಸರಿ ಬಣ್ಣ ತ್ಯಾಗ, ಬಿಳಿ ಶಾಂತಿ, ಹಸಿರು ಸಮೃದ್ಧಿಯನ್ನು ಪ್ರತಿನಿಧಿಸುವುದಾಗಿ ಮತ್ತು ಅಶೋಕ ಚಕ್ರ ನಿರಂತರ ಪ್ರಗತಿಯನ್ನು ಸೂಚಿಸುವುದಾಗಿ ಅವರು ವಿವರಿಸಿದರು. ಈ ಧ್ವಜಾ ಅನಾವರಣಕ್ಕೆ ಕಾರಣರಾದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮತ್ತು ವಿನೋದ್ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಕ್ಕೆ ಧನ್ಯವಾದ ಹೇಳಿದರು. ದೇಶಪ್ರೇಮ, ಬ್ರಾತೃತ್ವ ಮತ್ತು ಮನುಷ್ಯತ್ವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದ ಸಿ.ಎಂ, ಗಾಂಧೀಜಿ ಬೆಳಗಾವಿಯಲ್ಲಿ ಅಧ್ಯಕ್ಷತೆ ವಹಿಸಿದ ಕಾಂಗ್ರೆಸ್ ಅಧಿವೇಶನದ ಶತಮಾನವನ್ನು ಸ್ಮರಿಸಿ, ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವ ಕಾರ್ಯ ಇಂದಿಗೂ ನೆರವೇರುತ್ತಿದೆ ಎಂದರು.
