
ಮೈಸೂರು: ಸಿಎಂ ತವರೂರಾದ ಮೈಸೂರಿನಲ್ಲಿ ಸ್ಮಶಾನ ಜಾಗವಾಗಿದ್ದ ಕಪನಯ್ಯತೋಪು ಈಗ ಮುಸ್ಲಿಮರ ಖಬ್ರಸ್ಥಾನವಾಗಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಸರ್ವೇ ನಂಬರ್ 257ರ ಆಸ್ತಿ ಈಗ ವಕ್ಫ್ ಆಗಿ ಬದಲಾವಣೆಯಾಗಿದೆ. ಈ ಮೊದಲು ಅಂದರೆ 2010-20ರಂದು ಪಹಣಿಯಲ್ಲಿ ಕಪನಯ್ಯತೋಪು ಎಂದು ದಾಖಲಿಸಲಾಗಿತ್ತು. ಇದಕ್ಕೂ ಮುಂಚೆ ಹಿಂದೂ ಸಮುದಾಯದ ರಂಗಭೂಮಿಯಾಗಿತ್ತು, ಅದಕ್ಕೆ ಪುರಾವೆಯೆಂಬಂತೆ ಆ ಜಾಗದಲ್ಲಿ ಹಿಂದೂ ಸಮುದಾಯದವರ ಸಮಾಧಿಯು ಇದೆ. ಆದರೆ ಈಗ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬದಲಾಯಿಸಿದ್ದಾರೆ. ಇದು ಕಾವೇರಿ ನದಿ ದಡದಿಂದ ಕೇವಲ 200 ಮೀಟರ್ ಅಂತರದಲ್ಲಿದೆ, ರಂಗಸಮುದ್ರ ಎಂಬ ಗ್ರಾಮಕ್ಕೆ ಕುಡಿಯುವ ನೀರನ್ನು ಈ ಜಾಗದಿಂದಲೇ ಪೂರೈಸಲಾಗುತ್ತದೆ. ಈ ಸ್ಥಳವನ್ನು ಏಕಾಏಕಿ ಮುಸ್ಲಿಮರ ವಕ್ಫ್ ಆಸ್ತಿ ಎಂದು ಬದಲಾವಣೆ ಆಗಿದುವುದಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.