
ವಿಟ್ಲ: ವಿಟ್ಲದ ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ ಸುಲೈಮಾನ್ ಅವರ ಪ್ರಥಮ ಪತ್ನಿಯ ಪುತ್ರನ ಮಗಳಾದ ಹಸೀನಾ ಮೇಲೇ ದ್ವಿತೀಯ ಪತ್ನಿಯ ಪುತ್ರ ಮಹಮ್ಮದ್ ಅಶ್ರಫ್ ಜಾಗದ ಕಿರಿಕಿರಿಯಿಂದಾಗಿ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅಶ್ರಫ್ ಕುತ್ತಿಗೆಗೆ ಬೀಸಿದ ಕತ್ತಿಯನ್ನು ತಡೆಯಲು ಕೈ ಅಡ್ಡ ಹಿಡಿದಿದ್ದು, ಬೀಸಿದ ರಭಸಕ್ಕೆ ಬೆರಳಿಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೋಲಿಸ್ ಠಾಣೆಯ ಉಪನಿರೀಕ್ಷಕ ರತ್ನಾಕರ ಮತ್ತು ತಂಡ ಭೇಟಿ ನೀಡಿ ತನಿಖೆ ಮಾಡಿದ್ದಾರೆ.