
ಚನ್ನಗಿರಿ: ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಅನುದಾನದಡಿಯಲ್ಲಿ ಈ ಹಿಂದೆ ಇದ್ದ ಪಂಚಾಯಿತಿ ಕಟ್ಟಡ ಜಾಗದಲ್ಲಿ ಗುದ್ದಲ್ಲಿ ಪೂಜೆ ನಡೆದಿದ್ದು, ಇದೇ ಜಾಗದಲ್ಲಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥ ಆರ್ ಮಹಾರುದ್ರಪ್ಪ ಆಗ್ರಹಿಸಿದರು. ಅವರು ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುದಿಗೆರೆ ಗ್ರಾಮದ ಹಾಲಿ ಇರುವ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಿ ವಾಲ್ಮೀಖಿ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ರಾಷ್ಟ್ರೀಯ ಗ್ರಾಮ ಸ್ವರಾಜ್ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಅನುದಾನದಡಿಯಲ್ಲಿ ಈ ಹಿಂದೆ ಇದ್ದ ಪಂಚಾಯಿತಿ ಕಟ್ಟಡ ಜಾಗದಲ್ಲಿ ಗುದ್ದಲ್ಲಿ ಪೂಜೆ ನಡೆದಿದ್ದು, ಇದೇ ಜಾಗದಲ್ಲಿ ಪಂಚಾಯಿತಿ ಕಟ್ಟಡ ನಿರ್ಮಾ ಮಾಡಬೇಕೆಂದು ಗ್ರಾಮಸ್ಥರೆಲ್ಲರೂ ಸಹ ಸಂಬಂಧಪಟ್ಟ ಅಧಿಕಾರಿಗಳಾದ, ದಾವಣಗೆರೆ ಜಿಲ್ಲಾ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಣಾಧಿಕಾರಿ ಮತ್ತು ತಾಲ್ಲೂಕು ಪಂಚಾಯತ್ ಮುಖ್ಯ ನಿರ್ವಾಹಣಾಧಿಕಾರಿ, ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರೂ ಸಹ ಯರೋ ಕಿಡಿಕೇಡಿಗಳ ಒತ್ತಾಯದ ಮೇರೆಗೆ ಅಧಿಕಾರಿಗಳು ಮಣಿದು ಸ್ಥಳಾಂತರ ಮಾಡುವುದರ ವಿರುದ್ಧ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿ ಎದುರು ಮುದಿಗೆರೆ ಗ್ರಾಮಸ್ಥರು ಸೇರಿ ಆಗ್ರಹಿಸಿ ಈ ಹಿಂದೆ ಪ್ರತಿಭಟನೆಯನ್ನು ನಡೆಸಿದ್ದೆವು, ಗುದ್ದಲಿ ಪೂಜೆ ನಡೆದ ಜಾಗದಲ್ಲಿಯೇ ಕಟ್ಟಡ ನಿರ್ಮಾಣವಾಗಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ರವಿ ಕುಮಾರ್, ವೀರೇಶ್, ಸಂತೋಷ್, ಸುರೇಶ್, ಹೆಚ್ಎಸ್ ಸ್ವಾಮಿ, ಬಸವರಾಜಪ್ಪ, ಮುಂತಾದವರು ಹಾಜರಿದ್ದರು.
ವರದಿ: ಕುಳೇನೂರು ಅರುಣ್ ಕುಮಾರ್ ಎ
ವರದಿಗಾರರು ಚನ್ನಗಿರಿ ತಾಲ್ಲೂಕು





