
ಚಿಕ್ಕಮಗಳೂರು: “ಮಕ್ಳ ನಾನು ಮುಂದೆ ಹೋಗ್ತೀನಿ.. ನನ್ನ ಹಿಂದೆಯೇ ಬನ್ನಿ.. ಬೇರೆ ಕಡೆ ಹೋಗ್ಬೇಡಿ, ಯಾರ್ ಬರ್ತಾರೋ ಬರ್ಲಿ.. ಏನ್ ಬರುತ್ತೋ ಬರ್ಲಿ.. ಸೈಲೆಂಟಾಗಿ ನನ್ನ ಹಿಂದೆ ಬನ್ನಿ.. ಎಂಬಂತೆ ಆನೆಗಳು ತಮ್ಮ ಮರಿಗಳನ್ನು ಜೊತೆಗೇ ಕರೆದೊಯ್ಯುತ್ತಿರುವುದು ಡ್ರೋನ್ ಕ್ಯಾಮರಾದಲ್ಲಿ ಸೆರೆಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ-ಕಸ್ಕೆಬೈಲು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಒಂದೆರಡು ವರ್ಷದ ಅಡಿಕೆ ತೋಟಗಳಲ್ಲಿ ಸಂಚರಿಸಿದ ಕಾಡಾನೆಗಳು ಗಿಡಗಳನ್ನು ನಾಶಪಡಿಸಿದೆ. ನಿತ್ಯ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಕಂಗೆಟ್ಟಿದ್ದು, ಆನೆಗಳ ಹಿಂಡನ್ನು ಕಂಡು ಭಯಗೊಂಡ ಕಾರ್ಮಿಕರು ಕೂಲಿಗೂ ಹೋಗಲು ಹೆದರುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.




