
ಶೃಂಗೇರಿ: ಶ್ರೀ ಶೃಂಗೇರಿ ಶಾರದಾ ಪೀಠಂ ವತಿಯಿಂದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ 75ನೇ ವರ್ಧಂತಿ ಮಹೋತ್ಸವದ ಅಂಗವಾಗಿ ‘ವಜ್ರೋತ್ಸವ ಭಾರತೀ’ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭ್ಯುದಯಕ್ಕಾಗಿ, ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಪ್ಪಣೆಯಂತೆ ರಿಯಾಯಿತಿ ದರದಲ್ಲಿ ಪ್ರಸಾದ ರೂಪವಾಗಿ 75 ಆಟೋ ರಿಕ್ಷಾಗಳನ್ನು ವಿತರಿಸಲು ಘೋಷಿಸಲಾಗಿದ್ದು, ಶೃಂಗೇರಿ ಕ್ಷೇತ್ರದ ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ನಿಬಂಧನೆಗಳನ್ನು ಗಮನದಿಂದ ಓದಿ, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 05-03-2026ರೊಳಗಾಗಿ ಆಡಳಿತಾಧಿಕಾರಿಗಳ ಕಛೇರಿಯ ಲೆಕ್ಕ-ಪತ್ರ ವಿಭಾಗಕ್ಕೆ ಖುದ್ದಾಗಿ ಸಲ್ಲಿಸಬೇಕು.



