
ಉತ್ತರ ಕರ್ನಾಟಕ ಪ್ರಸಿದ್ಧ ಜಾತ್ರೆ ಎಂದರೇ ಅದೇ ಚಿಮ್ಮಡ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಜಾತ್ರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅತೀ ವಿಜೃಂಭಣೆಯಿಂದ ಜರುಗಿತು.
ಉತ್ತರ ಕರ್ನಾಟಕದ ಕಿಚಡಿ ಜಾತ್ರೆಯಂದೇ ಹೆಸರುವಾಸಿ ಆಗಿರುವ ಶ್ರೀ ಪ್ರಭುಲಿಂಗೇಶ್ವರ ಜಾತ್ರೆಯು ಅವರಿವರೆನ್ನದೆ ಸರ್ವ ಧರ್ಮದ ಭಕ್ತರು ಹಾಗೂ ಮಹಾರಾಷ್ಟ ಆದ್ರಪ್ರದೇಶದಿಂದ ಸಾವಿರಾರು ಭಕ್ತರು ಬಂದು ದೇವರ ದರ್ಶನ್ ಪಡೆದು ಕಿಚಡಿ ಪ್ರಸಾದ್ ಸವಿದರು.
ಈ ಜಾತ್ರೆಯಲ್ಲಿ ಅನ್ನ ಪ್ರಸಾದ್ ಸೇವೆ.
ಶ್ರೀ ಪ್ರಭುಲಿಂಗೇಶ್ವರ ರಥೋತ್ಸವ.
ಕರಡಿ ಮಜಲು.
ಹಾಸ್ಯ ಬರಿತ ಕೌಟುಂಬಿಕ ನಾಟಕ ಹಾಗೂ ಇನ್ನು ಅನೇಕ ಮನರಂಜನೆಗಳನ್ನು ಆಯೋಜಿಸಿದ್ದರು.
ಅದ್ದೂರಿಯಾಗಿ ಜರುಗಿದ ಜಾತ್ರೆಯಲ್ಲಿ ಸಾವಿರಾರು ಜನ ಭಕ್ತಾದಿಗಳ ದಂಡೆ ಹರಿದು ಬಂದಿತ್ತು.
ಯಾರಿಗೂ ಯಾವುದೇ ರೀತಿಯ ಗದ್ದಲ ಗಲಾಟೆ ಇನ್ನು ಯಾವುದೇ ತೊಂದರೆ ಆಗದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಹ ರಕ್ಷಕದಳ ಸಿಬ್ಬಂದಿಗಳು ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸಿದರು.