
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ರಬಕವಿ ಶ್ರೀ ಮಲ್ಲಿಕಾರ್ಜುನ ದೇವರ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು. ಬಾಗಲಕೋಟೆ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟದಿಂದ ಭಕ್ತಾದಿಗಳು ಬಂದು ಶ್ರೀ ಮಲ್ಲಿಕಾರ್ಜುನ ರಥೋತ್ಸವ ಕಂಡು ಕಣ್ತುಂಬಿಕೊಂಡರು. ದೂರ-ದೂರದ ಊರಿನಿಂದ ವಿವಿಧ ದೇವರ ಪಾಲಕಿ ತಂದು ಕೃಷ್ಣ ನದಿಗೆ ಹೋಗಿ ಮಡಿ ಸ್ನಾನ ಮಾಡಿ ಶ್ರೀ ಮಲ್ಲಿಕಾರ್ಜುನ ದೇವರ ರಥೋತ್ಸವಕ್ಕೆ ಪಾಲ್ಗೊಳ್ಳುತ್ತಾರೆ.
ತಲ-ತಲಾತರದಿಂದ ನಡೆದು ಬಂದ ಪದ್ಧತಿ ಏನೆಂದರೆ ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ ಪಾಲಕಿ ಬಂದು ಮಹಾಲಿಂಗೇಶ್ವರ ಮೂರ್ತಿಯನ್ನು ಶ್ರೀ ಮಲ್ಲಿಕಾರ್ಜುನ ಮೂರ್ತಿ ಜೊತೆ ರಥದಲ್ಲಿ ಇಟ್ಟು ರಥೋತ್ಸವ ಜರುಗುವುದು ವಿಶೇಷ. ಸಾವಿರಾರು ಭಕ್ತಾದಿಗಳು ಬಂದು ಶ್ರೀ ಮಲ್ಲಿಕಾರ್ಜುನ ರಥೋತ್ಸವ ನೋಡಿ ದೇವರ ಕೃಪೆಗೆ ಪಾತ್ರರಾದರು. ಇದೆ ಸಂದರ್ಭದಲ್ಲಿ ಯಾರಿಗೂ ಯಾವುದೇ ರೀತಿಯ ಗದ್ದಲ ಗಲಾಟೆ ವಿವಿಧ ರೀತಿಯ ತೊಂದರೆ ಆಗದಂತೆ ಪೊಲೀಸ್ ಸಿಬ್ಬಂದಿಗಳು ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸಿದರು.