
ತುಳಸಿ ಗಿಡವು ದೈವಿಕ ಶಕ್ತಿಯನ್ನು ಹೊಂದಿದ್ದು. ಇದು ಒಂದಉ ಪವಿತ್ರ ಗಿಡವಾಗಿದೆ. ತುಳಸಿಯನ್ನು ಪೂಜೆ ಪುನಸ್ಕಾರಗಳಲ್ಲಿ ಹಾಗೂ ದೇವರಿಗೆ ಹಾರದ ರೀತಿಯಲ್ಲಿ ಅರ್ಪಿಸಲಾಗುತ್ತದೆ. ಇದನ್ನು ಔಷಧೀಯ ಗುಣಗಳನ್ನು ಹೊಂದಿದ್ದು, ಮೂಲಿಕೆಯ ರಾಣಿ ಎಂದು ಕರೆಯಲಾಗುತ್ತದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ತುಳಸಿ ರಸ ಅಥವಾ ಕಷಾಯವನ್ನು ಕುಡಿಯುವುದರಿಂದ ಜ್ವರ, ಶೀತ, ಕೆಮ್ಮು ಹಾಗೂ ಗಂಟಲು ನೋವು ನಿವಾರಣೆಯಾಗುತ್ತದೆ. ತುಳಸಿ ಎಲೆಗಳನ್ನು ಅರಿದು ತ್ವಚೆಗೆ ಹಚ್ಚಿಕೊಳ್ಳುವುದರಿಂದ ಮೊಡವೆ ಅಥವಾ ಇತರ ಚರ್ಮ ಸಮಸ್ಯೆಯನ್ನು ಶಮನಗೊಳಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಗಿದೆ.
ತುಳಸಿ ನೈಸರ್ಗಿಕ ಮೌತ್ ಪ್ರೆಶ್ನರ್ ಆಗಿದೆ. ತುಳಸಿ ವನಗಳಲ್ಲಿ ವಾಕಿಂಗ್ ಮಾಡುವುದರಿಂದ ಉಸಿರಾಟ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮೈಗ್ರೆನ್ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಇದು ರೋಗಗಳನ್ನು ನಿವಾರಣೆ ಮಾಡುವಲ್ಲಿ ಒಳ್ಳೆಯ ಪಾತ್ರವನ್ನು ವಹಿಸುತ್ತದೆ.