ತುಂಬೆ ಗಿಡ: ತುಂಬೆ ಗಿಡಗಳಿಂದ ಅನೇಕ ರೀತಿಯ ಅನುಕೂಲಗಳಿದ್ದು, ಇದು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇದು ಮನೆಯ ಸುತ್ತ-ಮುತ್ತಲಿನಲ್ಲಿ ಸರ್ವೇ ಸಾಮಾನ್ಯವಾಗಿ ಬೆಳೆಯುವ ಗಿಡವಾಗಿದೆ. ತುಂಬೆ ಹೂವುಗಳಲ್ಲಿ ಹಲವು ಬಣ್ಣಗಳನ್ನು ಹೊಂದಿದೆ. ತುಂಬೆ ಹೂವನ್ನು ದೇವರ ಪೂಜೆಗಳಲ್ಲಿಯೂ ಬಳಸಲಾಗುತ್ತದೆ ಹಾಗೆಯೇ ಶಿವನಿಗೆ ಪ್ರಿಯವಾದ ಹೂವೂ ಕೂಡಾ ಆಗಿದೆ. ಜೀರ್ಣಕಾರಿ ಸಮಸ್ಯೆಗಳಿಗೆ ಇದು ಪರಿಹಾರವನ್ನು ಒದಗಿಸುತ್ತದೆ. ತುಂಬೆ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಹಾಗೂ ಉದರ ಸಂಭಂದಿ ಸಮಸ್ಯೆಗಳನ್ನು ನಿವಾರಿಸುತ್ತದೆ. ತುಂಬೆ ಗಿಡದ ಎಲೆಗಳ ರಸವನ್ನು ತೆಗೆದು ಸಂಧಿವಾತ, ಮುಟ್ಟಿನ ನೋವು ಹಾಗೂ ಕೀಲು ನೋವುಗಳಿಗೆ ಹಚ್ಚುವುದರಿಂದ ನೋವನ್ನು ನಿವಾರಿಸುತ್ತದೆ. ಚಿಕ್ಕಮಕ್ಕಳಿಗೆ ನೆಗಡಿಯಾದಾಗ ಹೂವಿನ ರಸವನ್ನು ತಾಯಿಯ ಹಾಲಿನಲ್ಲಿ ಬೆರಸಿ ಹಚ್ಚಲಾಗುತ್ತದೆ ಇದರಿಂದಾ ಶೀತ, ಕೆಮ್ಮಿಗೆ ಪರಿಹಾರವಾಗುತ್ತದೆ. ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರು ತುಂಬೆ ಗಿಡದ ಬೇರಗಳನ್ನು ಶುಚಿಗೊಳಿಸಿ ಕಾಳು ಮೆಣಸಿನೊಂದಿಗೆ ಸೇವಿಸುವುದರಿಂದ ಸಮಸ್ಯೆಯು ಶಮನವಾಗುತ್ತದೆ.
