
ರಕ್ತ ಚಂದನ: ರಕ್ತ ಚಂದನವು ಹಲವು ರೀತಿಯ ಉಪಯೋಗಗಳನ್ನು ಒಳಗೊಂಡಿದ್ದು. ಇದನ್ನು ಪೂಜೆ ಹಾಗೂ ಔಷಧಗಳಲ್ಲಿ ಉಪಯೋಗಿಸಲಾಗುತ್ತದೆ. ರಕ್ತ ಚಂದನವನ್ನು ಕೆಂಪು ಶ್ರೀಗಂಧ ಎಂದು ಸಹ ಕರೆಯಲಾಗುತದೆ. ಇದನ್ನು ಸುಗಂಧ ದ್ರವ್ಯಗಳಲ್ಲೂ ಸಹ ಬಳಸುತ್ತಾರೆ.
ಇದರ ಸುಗಂಧವು ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ. ಚರ್ಮದ ಹೊಳಪು ಹಾಗೂ ಸೌಂಧರ್ಯ ವರ್ಧಕಗಳಲ್ಲಿ ಇದನ್ನು ಬಳಸಲಾಗುತ್ತದೆ. ಜ್ವರ, ಪಿತ್ತ ಸಂಬಂಧಿತ ಸಮಸ್ಯೆಗಳು ಹಾಗೂ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದರ ಚಿಕಿತ್ಸೆಯಲ್ಲೂ ಬಳಸುತ್ತಾರೆ. ಉರಿಯೂತ, ಉಷ್ಣತೆ ಹಾಗೂ ಬಾಯಾರಿಕೆಯನ್ನು ನಿವಾರಿಸುತ್ತದೆ. ರಕ್ತ ಶುದ್ಧೀಕರಣ ಗುಣವನ್ನು ಹೊಂದಿದೆ.
ಇದು ಕೆಂಪು ಬಣ್ಣ ಹೊಂದಿದೆ. ಪಿಠೋಪಕರಣಗಳಲ್ಲಿ, ಧಾರ್ಮಿಕ ಕಾರ್ಯಗಳಲ್ಲಿ ಧೂಪ, ದೀಪ ಹಾಗೂ ಅಲಂಕಾರಗಳಲ್ಲಿ ರಕ್ತ ಚಂದನವನ್ನು ಬಳಸಲಾಗುತ್ತದೆ.