
ಮೆಂತ್ಯ ಕಾಳು: ಮೆಂತ್ಯ ಕಾಳುಗಳು ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿದೆ. ನೆನೆಸಿದ ಮೆಂತ್ಯ ಕಾಳುಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಮಲಬದ್ಧತೆ, ವಾಯು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ. ಮೆಂತ್ಯ ಕಾಳನ್ನು ನೆನೆಸಿ ಅದರ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೆಂತ್ಯ ಕಾಲನ್ನು ಸೇವಿಸುವುರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ ಹಾಗೂ ಕೂದಲು ಉದುರುವಿಕೆ, ಹೊಟ್ಟನ್ನ ತಡೆಗಟಗಟ್ಟುತ್ತದೆ. ಇದರಿಂದಾಗಿ ಹಾಲುಣಿಸುವ ತಾಯಂದರಿಗೆ ಹಾಲಿನ ಪ್ರಮಾಣ ಹೆಚ್ಚಿಸುತ್ತದೆ. ತೂಕ ಇಳಿಸಲು ಇದು ಸಹಕಾರಿಯಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ.