
ಕಿವಿ ಹಣ್ಣನ್ನು ನೇರವಾಗಿ ತಿನ್ನಬಹುದಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಬಹುದಾಗಿದೆ. ಕಿವಿ ಹಣ್ಣನ್ನು ಜೇನುತುಪ್ಪ, ಪುದೀನ ಎಲೆಗಳು ಹಾಗೂ ನಿಂಬೆ ರಸದೊಂದಿಗೆ ಸೇರಿಸಿ ಸಲಾಡ್ ತಯಾರಿಸಿ ಸೇವಿಸಬುಹುದಾಗಿದೆ. ಕಿವಿಯ ಸಿಪ್ಪೆಯು ನಾರಿನ ಅಂಶವನ್ನು ಹೊಂದಿರುವುದರಿಂದ ಹಣ್ಣನ್ನು ಚೆನ್ನಾಗಿ ಶುಚಿಗೊಳಿಸಿ ಸಿಪ್ಪೆಯೊಂದಿಗೆ ಸೇವಿಸಬಹುದಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪಾತ್ರವಹಿಸುತ್ತದೆ. ಚರ್ಮವನ್ನು ಯೌವನವಾಗಿಡಲು ಸಹಕರಿಸುತ್ತದೆ ಹಾಗೂ ಕಾಂತಿಯುತವನ್ನಾಗಿಸುತ್ತದೆ. ಲುಟೀನ್ ಹಾಗೂ ಜಿಯಾಕ್ಸಾಂಥಿನ್ ಅಂಶವನ್ನು ಹೊಂದಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.