
ಚಿಯಾ ಬೀಜಗಳು: ಚಿಯಾ ಬೀಜಗಳಲ್ಲಿ ಹಲವು ಆರೋಗ್ಯವನ್ನು ಸುಧಾರಿಸುವ ಅಂಶವನ್ನು ಹೊಂದಿದೆ. ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ದತೆಯನ್ನು ತಡೆಯುತ್ತದೆ. ಬೆಳಗ್ಗೆ ಒಂದು ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ ಹಾಕಿ ನೆನಸಿ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಚಿಯಾ ಬೀಜಗಳು ಪೌಷ್ಟಿಕಾಂಶಗಳಿಂದ ಕೂಡಿದೆ. ಅತಿಯಾದ ತೂಕವನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ. ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ-೩ ಕೊಬ್ಬಿನಾಮ್ಲ, ಕ್ಯಾಲ್ಸಿಯಂ, ಮಗ್ನೀಸಿಯಮ್ನ್ನು ಹೊಂದಿದೆ. ಇದನ್ನು ಮೊಸರು, ಧಾನ್ಯ ಹಾಗೂ ಹಾಲಿನೊಂದಿಗೆ ಸಿಂಪಡಿಸಿ ಸೇವಿಸಬಹುದಾಗಿದೆ.