
ವೀಳ್ಯದೆಲೆ: ವೀಳ್ಯದೆಲೆಯು ವಿವಿಧ ರೀತಿಯ ಆರೋಗ್ಯಕರವಾದ ಪ್ರಯೋಜನಗಳನ್ನು ಹೊಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಯನ್ನು ಪೂಜೆಗಳು, ದೇವರ ಕಾರ್ಯಗಳಲ್ಲಿ ಹಾಗೂ ಫಲತಾಂಬೂಲಗಳಲ್ಲಿ ಬಳಸುತ್ತಾರೆ. ಇದು ಒಳ್ಳೆಯ ಮನೆ ಮದ್ದಾಗಿದೆ. ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ. ಇದು ಕೂದಲು ಉದುರುವಿಕೆ, ತಲೆಯ ಹೊಟ್ಟು ನಿವಾರಣೆಗೆ ಸಹಾಯಕವಾಗಿದೆ. ಚರ್ಮದ ಅಲರ್ಜಿ ಸಂಬಂಧಿ ತುರಿಕೆ ನಿವಾರಣೆಯಾಗುತ್ತದೆ. ಕೆಟ್ಟ ಕೊಲಸ್ಟಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ವೀಳ್ಯದೆಲೆಯನ್ನು ಬೆಚ್ಚಗೆ ಮಾಡಿ ಎದೆಗೆ ಹಚ್ಚುವುದರಿಂದ ಹಾಗೂ ಅದರ ರಸವನ್ನು ಸೇವಿಸುವುದರಿಂದ ಕೆಮ್ಮು, ಶೀತ, ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ. ಊಟದ ನಂತರ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಮಧುಮೇಹ ನಿಯಂತ್ರಣ ಹಾಗೂ ಹಲ್ಲಿನ ಕುಳಿ, ವಸಡು ಕೊಳೆತ ಮುಂತಾದ ಸಮಸ್ಯೆಗಳನ್ನು ಶಮನಗೊಳಿಸುತ್ತದೆ.