
ಬಿದಿರು ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಮನೆಯಂಗಳದಲ್ಲಿ ಬೆಳೆಯುತ್ತಿದ್ದಾರೆ. ಇಂದು, ಬಿದಿರಿನ ಸಸ್ಯಗಳು ವಿವಿಧ ಪ್ರಭೇದಗಳಲ್ಲಿ ಲಭ್ಯವಿದ್ದು, ಮನೆಯಲ್ಲಿ ಬಿದಿರಿನ ಗಿಡ (ವಾಸ್ತು ಗಿಡ) ಇಡುವುದಕ್ಕೆ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ಬಿದಿರಿನ ಗಿಡವನ್ನ ಮನೆಯಲ್ಲಿ ಇರಿಸುವುದರಿಂದ ಧನಾತ್ಮಕ ಶಕ್ತಿ ಮತ್ತು ಅದೃಷ್ಟ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಬಿದಿರಿನ ಗಿಡವನ್ನ ಪೂರ್ವದಿಕ್ಕಿನಲ್ಲಿ ಇಡುವುದರಿಂದ ಕುಟುಂಬದ ಆರೋಗ್ಯ ಸುಧಾರಿಸುತ್ತದೆ ಮತ್ತು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇರಿಸಬೇಕು. ಈ ಸಸ್ಯಗಳಿಗೆ ಇಟ್ಟಿರುವ ನೀರನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು ಆಗ ಸಸ್ಯವು ಆರೋಗ್ಯವಾಗಿರುತ್ತದೆ. ಇದು ಗಾಳಿ ಶುದ್ಧೀಕರಣಕ್ಕೆ ಹೆಸರು ವಾಸಿಯಾಗಿದೆ. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ಇದು ಉತ್ತೇಜಿಸುತ್ತ, ಮಾನಸಿಕ ಒತ್ತಡವನ್ನ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.