ಚಿಕ್ಕಮಗಳೂರು: ಎಂ.ಇ.ಎಸ್. ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ ಮೂವರು ಮೊದಲ ವರ್ಷದ ಪಿಯು ವಿದ್ಯಾರ್ಥಿಗಳನ್ನು ಸಮವಸ್ತ್ರ ನೀತಿ ಉಲ್ಲಂಘನೆ ಎಂಬ ನೆಪದಲ್ಲಿ ಪ್ರಿನ್ಸಿಪಾಲ್ ಕ್ಲಾಸ್ನಿಂದ ಹೊರಗೆ ಕಳುಹಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ವಿದ್ಯಾರ್ಥಿಗಳಿಗೆ ಮಾಲೆ ತೆಗೆದು ಬಂದರೆ ಮಾತ್ರ ಕಾಲೇಜಿಗೆ ಪ್ರವೇಶ ಎನ್ನುವ ಸೂಚನೆ ನೀಡಿದರೆಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಪ್ರತಿಯಾಗಿ ಪೋಷಕರು, ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಹಿಂದುಪರ ಸಂಘಟನೆಗಳು ಕಾಲೇಜು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಜನಿವಾರ ಧರಿಸಿದ್ದಕ್ಕೆ ಪರೀಕ್ಷೆಗೆ ಪ್ರವೇಶ ನಿರಾಕರಿಸಿದ ಘಟನೆಗೆ ಸಮಾನವಾಗಿ ಈ ಕ್ರಮವು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಘಟನೆಯನ್ನು ಪ್ರಶ್ನಿಸಲು ಕಾಲೇಜಿಗೆ ಬಂದ ಸಂಘಟನೆ ಮುಖಂಡರೊಂದಿಗೆ ಹಾಗೂ ಪ್ರಿನ್ಸಿಪಲ್ ನಡುವೆ ವಾಗ್ವಾದ ನಡೆದಿದೆ.
