
ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಮುಂಡ್ಕಿನಜೆಡ್ಡಿನ ವಿ| ದೀಕ್ಷಾ ವಿ ರವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸತತ ೨೧೬ ಘಂಟೆಗಳ ಕಾಲ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜಿನಲ್ಲಿ ಆಗಸ್ಟ್ ೨೧ರಂದು ದೀಕ್ಷಾ ವಿಮಣಿಪಾಲ ರತ್ನ ಸಂಜೀವ ಕಲಾಮಂಡಲದ ಸಹಭಾಗಿತ್ವದಲ್ಲಿ ನವರಸ ದೀಕ್ಷಾ ವೈಭವಂ ಕಾರ್ಯಕ್ರಮ ಪ್ರಾರಂಭಿಸಿದರು. ಇವರು ಸಾಧನೆಯನ್ನು ಆಗಸ್ಟ್ ೩೦ರ ಮಧ್ಯಾಹ್ನ ೩.೩೦ಕ್ಕೆ ಸಾಧನೆಯನ್ನು ಪೂರೈಸುತ್ತಿದ್ದಂತೆ ಪುಷ್ಪವೃಷ್ಟಿ ಮುಖಾಂತರ ಅಭಿನಂದನೆಯನ್ನು ಸಲ್ಲಿಸಲಾಯಿತು. ದೀಕ್ಷಾರವರ ದಾಖಲೆಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಣೋಯ್ ರವರು ಘೋಷಣೆ ಮಾಡಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ದೀಕ್ಷಾರವರ ಸಾಧನೆ ಬಗ್ಗೆ ಮಾತನಾಡಿ ಅಭಿನಂದಿಸಿದ್ದಾರೆ. ವಿ. ದೀಕ್ಷಾರವರಿಗೆ ಪ್ರಮಾಣ ಪತ್ರ ವಿತರಿಸುವ ಮೂಲಕ ಗೌರವಿಸಲಾಯಿತು. ಕಲಾಮಂಡಲದ ಮಹೇಶ್ ಠಾಕೋರ್ ಸ್ವಾಗತಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿಭಟ್, ಎಂ.ಎ ಗಪೂರ್, ಶಂಕರ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ್ ಶೆಟ್ಟಿ, ಡಾ. ರೋಶನ್ ಕುಮಾರ್ ಶೆಟ್ಟಿ, ಗುರು ಶ್ರೀಧರ್ ಬನ್ನಂಜೆ, ವಿ|ಉಷಾ ಹೆಬ್ಬಾರ್, ಗಿತಾಂಜಲಿ ಸುವರ್ಣ, ದೀಕ್ಷಾರವರ ತಂದೆ ವಿಟಲ್ ಪೂಜಾರಿ, ತಾಯಿ ಶುಭಾ, ಪತಿ ರಾಹುಲ್, ಕಿಶೋರ್ ಕುಮಾರ್ ಕುಂದಾಪುರ, ವಿ| ಯಶವಂತ್ ಎಂ.ಜೆ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಎಸ್.ಪಿ ಹರಿರಾಂ ಶಂಕರ್, ಜಿಲ್ಲಾಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಉಪಸ್ಥಿತರಿದ್ದರು.