
ಉಡುಪಿ: ಕುಕ್ಕಿಕಟ್ಟೆ ಮುಚ್ಚಲಗೋಡು ಸಮೀಪದ ಸುಬ್ರಹ್ಮಣ್ಯ ನಗರದಲ್ಲಿ ಮೂವರು ಮುಸುಕು ಹಾಕಿಕೊಂಡು ಮಧ್ಯರಾತ್ರಿ ೦೧ ಗಂಟೆ ಸುಮಾರಿಗೆ ವಿಠಲ್ ಪೂಜಾರಿ ಎಂಬುವವರ ಮನೆಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾರೆ, ಆದರೆ ಕಳ್ಳತನ ಮಾಡಲು ಏನೂ ಸಿಗದ ಕಾರಣ ಅಲ್ಲಿರುವ ವಸ್ತುಗಳನ್ನು ಚೆಲ್ಲ್ಲಾಪಿಲ್ಲಿ ಮಾಡಿ ಹಿಂತಿರುಗಿದ್ದಾರೆ. ನಂತರ ಅಲ್ಲಿಯೇ ಹತ್ತಿರದಲ್ಲಿದ್ದ ಇನ್ನೊಂದು ಮನೆಗೆ ಕಳವು ಮಾಡಲು ಯತ್ನಿಸಿದಾಗ ಮನೆಯವರು ಎಚ್ಚರಗೊಂಡು ಲೈಟ್ ಹಾಕಿದ್ದಾರೆ ಇದರಿಂದಾಗಿ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕಳ್ಳರ ತಂಡವು ಮನೆಗಳನ್ನು ಗುರುತಿಸಕೊಂಡು ಹೋಗುತ್ತಿರುವ ದೃಶ್ಯವು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಉಡುಪಿ ನಗರ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.